ಕೊಲ್ಲಿರ, ನಾಯಕಂಡ, ಕೊಟ್ಟಂಗಡ ಮೇಕ ತಂಡಗಳು ಮುನ್ನಡೆ

ನಾಪೋಕ್ಲು ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕೊಡವ ಕೌಟುಂಬಿಕ ಹಾಕಿಯ 26ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ರೋಚಕ ಕ್ಷಣಗಳು.
ನಾಪೋಕ್ಲು ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕೊಡವ ಕೌಟುಂಬಿಕ ಹಾಕಿಯ 26ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ರೋಚಕ ಕ್ಷಣಗಳು.
Published on
ನಾಪೋಕ್ಲು : ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ 26ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಕೊಲ್ಲಿರ ತಂಡವು ಬಲ್ಲಂಡ ತಂಡದ ವಿರುದ್ಧ 8-0 ಅಂತರದ ಭರ್ಜರಿ ಜಯ ಸಾಧಿಸಿತು. ಕೊಲ್ಲಿರ ತಂಡದ ಕೊಲ್ಲಿರ ಜಾನೀಶ್ ಅಪ್ಪಯ್ಯ ಅತಿ ವೇಗದ ಗೋಲು(21ಸೆಕೆಂಡ್) ದಾಖಲಿಸಿದರು.
ಉಳಿದಂತೆ ನಾಯಕಂಡ, ಮೇಕತಂಡ, ಪಾಲೆಯಡ, ಕಯ್ಮಂಡ, ಬೊಳ್ಳಚೆಟ್ಟಿರ, ತಡಿಯಂಗಡ ತಂಡಗಳು ಗೋಲು ಗಳಿಸಲು ವಿಫಲವಾದವು. ನಾಯಕಂಡ ತಂಡ ಅಚ್ಚಕಾಳಿರ ವಿರುದ್ಧ 5-0 ಅಂತರದಿಂದ, ಕೊಟ್ಟಂಗಡ ಮೇಕ ತಂಡ ವಿರುದ್ಧ 5-0 ಅಂತರದಿಂದ,ಪಾಲೆಯಡ ಆಪಾಡಂಡ ವಿರುದ್ಧ 1-0ಅಂತರದಿಂದ, ಮುಕ್ಕಾಟಿರ (ಕುಂಬಳದಾಳು) ಕುಯ್ಮಂಡ ವಿರುದ್ಧ 2-0 ಅಂತರದಿಂದ, ಚೇಂದಿರ ತಾಳಚಿರ ವಿರುದ್ಧ 5-0 ಅಂತರದಿಂದ, ತಡಿಯಂಗಡ ಮಾದೆಯಂಡ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿದವು.
ಬಾಚಳ್ಳಿರ ಮತ್ತು ನಾಗಚೆಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 1-1 ಅಂತರದ ಸಮಬಲ ಸಾಧಿಸಿದವು. ನಂತರ ನಡೆದ ಟೈ ಬ್ರೇಕರ್‌ನಲ್ಲಿ ಬಾಚಳ್ಳಿರ ತಂಡ 3-1 ಅಂತರದಿಂದ ಗೆಲುವು ಸಾಧಿಸಿತು. ಮೂಡೇರ ಮತ್ತು ಮುಂಡಚಾಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 2-2 ಸಮಬಲದ ಹೋರಾಟ ನಡೆಸಿದವು. ನಂತರ ಟೈ ಬ್ರೇಕರ್‌ನಲ್ಲಿ ಮುಂಡಚಾಡಿರ ತಂಡ 4-2 ಅಂತರದಿಂದ ಗೆಲುವು ಸಾಧಿಸಿತು.
ಚೇಂದ್ರಿಮಾಡ ಮತ್ತು ಬೊಜ್ಜಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 2-2 ಅಂತರದ ಸಮಬಲ ಸಾಧಿಸಿದವು. ನಂತರ ಟೈ ಬ್ರೇಕರ್‌ನಲ್ಲಿ ಚೇಂದ್ರಿಮಾಡ 3-2 ಅಂತರದಿಂದ ಜಯ ಸಾಧಿಸಿತು.
ಉಳಿದಂತೆ ಕಲ್ಲುಮಾಡಂಡ ಪಾಂಡಂಡ ವಿರುದ್ಧ 3-1ರಿಂದ, ಬಲ್ಲಂಡ ಕೊಲ್ಲಿರ ವಿರುದ್ಧ 2-1 ರಿಂದ, ಕರ್ತ ಚಿರ ತಾತಪಂಡ ವಿರುದ್ಧ 4-2 ಅಂತರದಿಂದ ಗೆಲುವು ಸಾಧಿಸಿದವು.
ಯುವ ಆಟಗಾರ ಕೀತಿಯಂಡ ಪೂರ್ವಿ ಪೂವಣ್ಣ ಕರ್ನಾಟಕ ಸಬ್ ಜೂನಿಯರ್ ರಾಷ್ಟ್ರೀಯ ತಂಡದ ಆಟಗಾರ ತಂಡದಲ್ಲಿ ಆಟವಾಡಿ ಗಮನಸೆಳೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net