ವಿಕಸಿತ ಬದುಕಿನ ಸಮಗ್ರ ಸಂವಿಧಾನವೇ ಹಿಂದುತ್ವ

 ಗುಡ್ಡೆಹೊಸೂರು ಬಸವೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಂಗಮ ಸಮಾವೇಶಕ್ಕೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಎಂ.ಸಾಗರ್ ಚಾಲನೆ ನೀಡಿದರು. ಕೇಶವ ಬಂಗೇರ, ವಿಜಯ್, ಕಮಲಾ, ಪಾರ್ವತಿ, ಕಾಳಯ್ಯ ಇದ್ದರು.
ಗುಡ್ಡೆಹೊಸೂರು ಬಸವೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಂಗಮ ಸಮಾವೇಶಕ್ಕೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಎಂ.ಸಾಗರ್ ಚಾಲನೆ ನೀಡಿದರು. ಕೇಶವ ಬಂಗೇರ, ವಿಜಯ್, ಕಮಲಾ, ಪಾರ್ವತಿ, ಕಾಳಯ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಯೋಜಕರಾದ ಕೇಶವ ಬಂಗೇರ ಅಭಿಪ್ರಾಯ
ಕುಶಾಲನಗರ: ಭಾರತೀಯತೆಯ ಉನ್ನತವಾದ ಪದ್ಧತಿ - ಪರಂಪರೆ, ಜಾತ್ರೆಗಳು ಹಾಗೂ ಯಾತ್ರೆಗಳು ಈ ನೆಲದ ವೀರಚರಿತ್ರೆಗಳು. ರಾಜನೈತಿಕವಾದ ಅಪೂರ್ವ ಜ್ಞಾನದ ಸಮುಚ್ಛಯವೇ ವಿಕಸಿತ ಬದುಕಿನ ಸಮಗ್ರ ಸಂವಿಧಾನವೇ ಹಿಂದುತ್ವ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ವಿಭಾಗದ ಸಂಯೋಜಕರಾದ ಕೇಶವ ಬಂಗೇರ ಪ್ರತಿಪಾದಿಸಿದರು.
ಗುಡ್ಡೆಹೊಸೂರು ಬಸವೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಂಗಮ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂ ಸಂಗಮ ಯಾರ ವಿರುದ್ಧವೂ ಅಲ್ಲ. ಅಥವಾ ದೇಶದಲ್ಲಿನ ಯಾವುದೇ ಪ್ರತಿಕೂಲ ಪರಿಸ್ಥಿತಿಗೂ ಅಲ್ಲ. ಜಾತಿ ಸಂಕೋಲೆಗಳನ್ನು ಕಿತ್ತೆಸೆದು ನಾವೆಲ್ಲಾ ಒಂದು. ನಾವೆಲ್ಲಾ ಬಂಧು ಎಂಬ ಧ್ಯೇಯದೊಂದಿಗೆ ಮಾನಸಿಕ ಹಾಗು ಬೌದ್ಧಿಕ ಶಕ್ತಿಯ ಸಂಚಲನದ ಮೂಲಕ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವ ಉದ್ದೇಶ ಹಿಂದೂ ಸಂಗಮದ ಆಶಯವಾಗಿದೆ ಎಂದರು.
ಹಿಂದೂಗಳು ಆರಾಧಿಸುವ ಪ್ರಕೃತಿ ಹಾಗೂ ಪರಿಸರವನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದೇ ಸಂರಕ್ಷಿಸಬೇಕಿದೆ. ಹಿಂದೂಗಳು ಎಲ್ಲರೂ ಒಗ್ಗೂಡುವ ಮೂಲಕ ಸಮೃದ್ಧ ಹಾಗೂ ಸಮರ್ಥ ರಾಷ್ಟ್ರ ಕಟ್ಟಬೇಕಿದೆ ಎಂದು ಕೇಶವ ಬಂಗೇರ ಕರೆಕೊಟ್ಟರು.
ಸಮಾವೇಶಕ್ಕೂ ಮುನ್ನ ಕುಶಾಲನಗರದ ರಾಷ್ಟ್ರೀಯ ಹೆದ್ದಾರಿಯಿಂದ ಗುಡ್ಡೆಹೊಸೂರು ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಮೂಲಕ ಹಾರಂಗಿ ರಸ್ತೆಯ ಬೊಳ್ಳೂರು ಬಸವೇಶ್ವರ ದೇವಾಲಯದವರೆಗೂ ಶೋಭಾಯಾತ್ರೆ ನಡೆಯಿತು.
ಗುಡ್ಡೆಹೊಸೂರು ಗ್ರಾ.ಪಂ. ಪೌರಕಾರ್ಮಿಕ ವಿಜಯ್, ಸುಣ್ಣದಕೆರೆ ಗ್ರಾಮದ ನಾಟಿವೈದ್ಯೆ ಕಮಲಾ, ಯೋಗ ಶಿಕ್ಷಕಿ ಪಾರ್ವತಿ, ನಿವಾಸಿ ಕಾಳಯ್ಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಎಂ.ಸಾಗರ್, ಹಿಂದೂ ಸಂಗಮ ಆಯೋಜಕ ಸಮಿತಿಯ ತಾಲೂಕು ಅಧ್ಯಕ್ಷ ದೇವಿ ಪ್ರಸಾದ್, ಪ್ರಮುಖರಾದ ಬಿ.ಬಿ.ಭಾರತೀಶ್, ಹೇರೂರು ಚಂದ್ರು, ಹರೀಶ್, ಮಹೇಂದ್ರ ಕುಮಾರ, ರಮೇಶ, ಉದಯ, ನಿತ್ಯಾನಂದ, ರವಿ, ಶಶಿಕುಮಾರ್, ಮನು ಇದ್ದರು.
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net