ಇದಕ್ಕೂ ಮುನ್ನ ಪಾರಾಣೆ ಮೂಲೆ ಅಂಗಡಿಯಿಂದ ಆರಂಭವಾದ ಶೋಭಾ ಯಾತ್ರೆಗೆ ನಿವೃತ್ತ ಯೋಧ ಕಿರುಂದಾಡು ಗ್ರಾಮದ ಬಿಟ್ಟಿರ ಮನು ಕುಮಾರ್ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಶೋಭಾ ಯಾತ್ರೆ ಪಾರಾಣೆ ಕೃಷಿ ಪತ್ತಿನ ಸಹಕಾರ ಸಂಘದ ರಸ್ತೆ ಮೂಲಕ ತೆರಳಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸಂಪನ್ನಗೊಂಡಿತು. ವಿವಿಧ ವೇಷಧಾರಿ ಮಕ್ಕಳು, ಭಾರತಾಂಬೆ ಭಾವಚಿತ್ರ ಒಳಗೊಂಡ ವಾಹನದೊಂದಿಗೆ ಕಳಸ ಹೊತ್ತ ಮಹಿಳೆಯರು, ಕೊಡಗಿನ ವಾಲಗ ಡೊಳ್ಳು ಕುಣಿತ ಚಂಡೆ ವಾದ್ಯ ದೇಶಭಕ್ತಿಯನ್ನು ಸಾರುವ ಪೋಸ್ಟರ್‌ಗಳು, ವಿವಿಧ ಕಲಾತಂಡಗಳಿಂದ ಮೆರವಣಿಗೆ ಮೆರುಗು ಹೆಚ್ಚಿತು.