ಗಮನ ಸೆಳೆದ ಗುಡ್ಡಗಾಡು ಓಟದ ಸ್ಪರ್ಧೆ

 ಗುಡ್ಡಗಾಡು ಓಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಿಗಳೊಂದಿಗೆ ಡಾ.ರೋಹಿಣಿ ತಿಮ್ಮಯ್ಯ, ಚಂದ್ರಶೇಖರ, ನರ್ತನ್ ನಾಚಪ್ಪ, ರಾಜರೈ ಇತರರಿದ್ದರು.
ಗುಡ್ಡಗಾಡು ಓಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಿಗಳೊಂದಿಗೆ ಡಾ.ರೋಹಿಣಿ ತಿಮ್ಮಯ್ಯ, ಚಂದ್ರಶೇಖರ, ನರ್ತನ್ ನಾಚಪ್ಪ, ರಾಜರೈ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಮನ ಸೆಳೆದ ಗುಡ್ಡಗಾಡು ಓಟದ ಸ್ಪರ್ಧೆ
ಪೊನ್ನಂಪೇಟೆ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪಿಯು ಕಾಲೇಜಿನ ಸಹಯೋಗದಲ್ಲಿ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಿತು.
ಸಿಐಪಿಯು ಕಾಲೇಜಿನ ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ ಸ್ಪರ್ಧೆಗೆ ಚಾಲನೆ ನೀಡಿದರು. ಎರಡೂ ತಾಲ್ಲೂಕುಗಳ ವಿವಿಧ ಪದವಿ ಪೂರ್ವ ಕಾಲೇಜುಗಳಿಂದ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು. ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ತಲಾ ಆರು ಮಂದಿ ಸೇರಿದಂತೆ ಒಟ್ಟು ೨೪ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.
ಪೊನ್ನಂಪೇಟೆ ತಾಲ್ಲೂಕಿನ ಬಾಲಕರ ವಿಭಾಗದಲ್ಲಿ ಸಿಐಪಿಯು ಕಾಲೇಜಿನ ಸಮಯ್ ಗಣಪತಿ, ಪ್ರಜ್ವಲ್, ನಿಖಿಲ್, ಸಂತ ಆಂಟೋನಿ ಕಾಲೇಜಿನ ಶಾಶ್ವತ್, ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ವಶೀಕರಣ್ ಹಾಗೂ ಕಾಪ್ಸ್ ಕಾಲೇಜಿನ ಎಂ.ಪಿ.ಅಯ್ಯಪ್ಪ ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಸಿಐಪಿಯು ಕಾಲೇಜಿನ ಚರಿಷ್ಮಾ, ಕೆ.ಆರ್.ವೈಷ್ಣವಿ, ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಾನ್ವಿ, ತ್ರಿಷಾ, ಸಂತ ಆಂಟೋನಿ ಕಾಲೇಜಿನ ಟಿ.ಆರ್.ರಿಷ್ಮಾ ಹಾಗೂ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಕೃತಿಕಾ ಸ್ಥಾನ ಪಡೆದಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಬಾಲಕರ ವಿಭಾಗದಲ್ಲಿ ಲಯನ್ಸ್ ಕಾಲೇಜಿನ ಸಿ.ವೈ.ಪ್ರಶಾಂತ್, ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಸಿ.ಎಸ್.ಚಿರಂಜೀವಿ, ಎಂ.ಮೊಹಮ್ಮದ್ ಅನಾಸ್, ಸಂತ ಅನ್ನಮ್ಮ ಕಾಲೇಜಿನ ಅಭಿ, ಪಿ.ಕೆ.ದೀಕ್ಷಿತ್ ಹಾಗೂ ಎಸ್.ಎಂ.ಎಸ್ ಕಾಲೇಜಿನ ಉಮರ್ ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಲಯನ್ಸ್ ಕಾಲೇಜಿನ ಪಿ.ಗ್ರಿಷ್ಮಾ ಪೊನ್ನಮ್ಮ, ಧನ್ಯ ಕಾವೇರಮ್ಮ, ಎಸ್.ಎಂ.ಎಸ್ ಕಾಲೇಜಿನ ಬಿ.ಎಚ್.ಬೃಂದಾ, ಎಂ.ಗಂಗೋತ್ರಿ, ಸಂತ ಅನ್ನಮ್ಮ ಕಾಲೇಜಿನ ಎಂ.ಯು.ಮುನವೀರಾ ಹಾಗೂ ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆ.ಎನ್.ನಾಜೀಯಾ ಆಯ್ಕೆಯಾಗಿದ್ದಾರೆ.
ಕೊಡಗು ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಚಂದ್ರಶೇಖರ, ಸಿಐಪಿಯು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನರ್ತನ್ ನಾಚಪ್ಪ, ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜರೈ ಸೇರಿದಂತೆ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಸ್ಪರ್ಧೆಯ ನಿರ್ವಹಣೆಯಲ್ಲಿ ಸಹಕರಿಸಿದರು.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳನ್ನು ಆಯೋಜಕರು ಅಭಿನಂದಿಸಿ, ಮುಂದಿನ ಹಂತದಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net