ಸುಧಾರಿತ ತಳಿಗಳಿಂದ ಹೆಚ್ಚಿನ ಆದಾಯ

ಸೋಮವಾರಪೇಟೆ ಸಮೀಪದ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾದ ಬೆಣ್ಣೆ ಹಣ್ಣಿನ ಸುಧಾರಿತ ತಳಿಗಳ ಪರಿಚಯಕ್ಕಾಗಿ ಹೊಸಕೋಟೆ ತಾಲೂಕಿನ ಎಸ್.ವಡ್ಡಳ್ಳಿ ಗ್ರಾಮದ ಪ್ರಗತಿಪರ ರೈತ ಎಸ್. ರವೀಂದ್ರ ಅವರ ತೋಟದಲ್ಲಿ ನಡೆದ ಕ್ಷೇತ್ರೋತ್ಸವನ್ನು ಡಾ. ಟಿ.ಕೆ. ಬೆಹರಾ ಉದ್ಘಾಟಿಸಿ ಮಾತನಾಡಿದರು. ರವೀಂದ್ರ, ಪ್ರಕಾಶ್, ಕರುಣಾಕರನ್, ಮುರುಳೀಧರ್ ಇದ್ದರು.
ಸೋಮವಾರಪೇಟೆ ಸಮೀಪದ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾದ ಬೆಣ್ಣೆ ಹಣ್ಣಿನ ಸುಧಾರಿತ ತಳಿಗಳ ಪರಿಚಯಕ್ಕಾಗಿ ಹೊಸಕೋಟೆ ತಾಲೂಕಿನ ಎಸ್.ವಡ್ಡಳ್ಳಿ ಗ್ರಾಮದ ಪ್ರಗತಿಪರ ರೈತ ಎಸ್. ರವೀಂದ್ರ ಅವರ ತೋಟದಲ್ಲಿ ನಡೆದ ಕ್ಷೇತ್ರೋತ್ಸವನ್ನು ಡಾ. ಟಿ.ಕೆ. ಬೆಹರಾ ಉದ್ಘಾಟಿಸಿ ಮಾತನಾಡಿದರು. ರವೀಂದ್ರ, ಪ್ರಕಾಶ್, ಕರುಣಾಕರನ್, ಮುರುಳೀಧರ್ ಇದ್ದರು.
Published on
ಸೋಮವಾರಪೇಟೆ: ದೇಶದಲ್ಲಿ ಬೆಣ್ಣೆ ಹಣ್ಣಿನ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ಸಂಶೋಧನೆಯ ಮೂಲಕ ಅಭಿವೃದ್ಧಿಪಡಿಸಿರುವ ಸುಧಾರಿತ ತಳಿಗಳು ರೈತರಿಗೆ ಉತ್ತಮ ಇಳುವರಿ ಹಾಗೂ ಹೆಚ್ಚಿನ ಆದಾಯ ತಂದುಕೊಡಲಿವೆ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಟಿ.ಕೆ.ಬೆಹರಾ ತಿಳಿಸಿದರು.
ಚೆಟ್ಟಳ್ಳಿಯ ಐಸಿಎಆರ್ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾದ ‘ಅರ್ಕಾ ಕೂರ್ಗ್ ರವಿ’ ಹಾಗೂ ‘ಅರ್ಕಾ ಸುಪ್ರೀಂ’ ಬೆಣ್ಣೆ ಹಣ್ಣಿನ (ಬಟರ್ ಫ್ರೂಟ್) ಸುಧಾರಿತ ತಳಿಗಳ ಪರಿಚಯಕ್ಕಾಗಿ ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಸ್.ವಡ್ಡಳ್ಳಿ ಗ್ರಾಮದ ಪ್ರಗತಿಪರ ರೈತ ಎಸ್.ರವೀಂದ್ರ ಅವರ ತೋಟದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಸೋಮವಾರಪೇಟೆ ಸಮೀಪದ ಚೆಟ್ಟಳ್ಳಿ ಕೇಂದ್ರದಲ್ಲಿ ಹಲವು ವರ್ಷಗಳ ಸಂಶೋಧನೆಯ ಬಳಿಕ ಅಭಿವೃದ್ಧಿಪಡಿಸಲಾದ ಅರ್ಕಾ ಕೂರ್ಗ್ ರವಿ ಮತ್ತು ಅರ್ಕಾ ಸುಪ್ರೀಂ ತಳಿಗಳನ್ನು 2020ರಲ್ಲಿ ಬಿಡುಗಡೆ ಮಾಡಲಾಗಿತ್ತು. ಉತ್ತಮ ಗುಣಮಟ್ಟದ ಹಣ್ಣು, ಅಧಿಕ ಇಳುವರಿ ಹಾಗೂ ವಾಣಿಜ್ಯ ಕೃಷಿಗೆ ಹೊಂದುವ ಗುಣಲಕ್ಷಣಗಳಿಂದ ಈ ತಳಿಗಳು ರೈತರ ಮೆಚ್ಚುಗೆ ಪಡೆದಿವೆ. ಇದುವರೆಗೆ ಚೆಟ್ಟಳ್ಳಿ ಕೇಂದ್ರದಿಂದ ಸುಮಾರು 2 ಲಕ್ಷಕ್ಕೂ ಅಧಿಕ ಕಸಿ ಗಿಡಗಳನ್ನು ರೈತರಿಗೆ ವಿತರಿಸಲಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಉತ್ತಮ ಬೇಡಿಕೆ ಕಂಡುಬಂದಿದೆ ಎಂದರು ತಿಳಿಸಿದರು.
ಹಣ್ಣುಗಳ ಯೋಜನಾ ಸಂಯೋಜಕರಾದ ಡಾ.ಪ್ರಕಾಶ್ ಪಾಟೀಲ್ ಹಾಗೂ ಡಾ.ಕರುಣಾಕರನ್ ಬೆಣ್ಣೆ ಹಣ್ಣಿನ ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಿದರು. ಚೆಟ್ಟಳ್ಳಿ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಂ.ಮುರುಳಿದರ್ ಅವರು ತಳಿಗಳ ವಿಶೇಷತೆ ಹಾಗೂ ಸಾಧನೆಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಬೆಣ್ಣೆ ಹಣ್ಣಿನ ತಳಿಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಯಶಸ್ವಿಯಾಗಿ ಬೆಣ್ಣೆ ಹಣ್ಣಿನ ಕೃಷಿ ನಡೆಸುತ್ತಿರುವ ಪ್ರಗತಿಪರ ರೈತ ಎಸ್.ರವೀಂದ್ರ ಅವರನ್ನು ಸನ್ಮಾನಿಸಲಾಯಿತು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಲವು ತಜ್ಞರು ಹಾಗೂ ವಿವಿಧ ಜಿಲ್ಲೆಗಳ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಜ್ಞರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಡಾ.ನಯನ್ ದೀಪಕ್, ಡಾ.ರಾಣಿ ಎ.ಟಿ., ಡಾ.ಮಧು ಜಿ.ಎಸ್., ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಾನಂದ ಹೊನಗಲ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net