ಅಂಗನವಾಡಿ ಮಕ್ಕಳಿಗೆ ಆರೋಗ್ಯ ತಪಾಸಣೆ

 ಪುಟಾಣಿನಗರ ಅಂಗನವಾಡಿ ಕೇಂದ್ರದಲ್ಲಿ ಅನೀಮಿಯ ಹಾಗೂ ಆರೋಗ್ಯ ತಪಾಸಣೆಯನ್ನು ಆರ್‌ಬಿಎಸ್‌ಕೆ ತಂಡದಿಂದ ನಡೆಸಲಾಯಿತು. ಸವಿತಾ ಕೀರ್ತನ್, ಶೈಮಾ, ಮಮತಾ ಇದ್ದರು.
ಪುಟಾಣಿನಗರ ಅಂಗನವಾಡಿ ಕೇಂದ್ರದಲ್ಲಿ ಅನೀಮಿಯ ಹಾಗೂ ಆರೋಗ್ಯ ತಪಾಸಣೆಯನ್ನು ಆರ್‌ಬಿಎಸ್‌ಕೆ ತಂಡದಿಂದ ನಡೆಸಲಾಯಿತು. ಸವಿತಾ ಕೀರ್ತನ್, ಶೈಮಾ, ಮಮತಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಗನವಾಡಿ ಮಕ್ಕಳಿಗೆ ಆರೋಗ್ಯ ತಪಾಸಣೆ
ಮಡಿಕೇರಿ: ನಗರದ ಪುಟಾಣಿನಗರ ಅಂಗನವಾಡಿ ಕೇಂದ್ರದಲ್ಲಿ ಅನೀಮಿಯ ಹಾಗೂ ಆರೋಗ್ಯ ತಪಾಸಣೆಯನ್ನು ಆರ್‌ಬಿಎಸ್‌ಕೆ ತಂಡದಿಂದ ಇತ್ತೀಚೆಗೆ ನಡೆಯಿತು.
ಅನಿಮಿಯ ತಪಾಸಣೆ ಕುರಿತು ಪೋಷಕರಿಗೆ ಮಾಹಿತಿ ನೀಡಿ ಮಾತನಾಡಿದ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಜನವರಿ ೨೦೨೬ ರಿಂದ ವರ್ಷದಲ್ಲಿ ಎರಡು ಬಾರಿ ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಒಳಪಡುವ ೬ ತಿಂಗಳಿಂದ ೫ ವರ್ಷದವರೆಗಿನ ಮಕ್ಕಳಿಗೆ ಅನಿಮಿಯ ತಪಾಸಣೆಯನ್ನು ಮಾಡಿ ಮಕ್ಕಳ ರಕ್ತಹೀನತೆ ತಡೆಗಟ್ಟುವ ಪ್ರಯತ್ನವನ್ನು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಪ್ರಾರಂಭಿಸಿದೆ. ಆರರಿಂದ ಐವತ್ತೊಂಬತ್ತು ತಿಂಗಳ ವಯಸ್ಸಿನ ಮಕ್ಕಳಲ್ಲಿ ಹಿಮೋಗ್ಲೋಬಿನ್ ಸಾಂದ್ರತೆ ಕಡಿಮೆ ಇದ್ದರೆ ರಕ್ತಹೀನತೆ ಎಂದು ಪರಿಗಣಿಸಲಾಗುವುದು. ಪೋಷಕರಿಗೆ ತಿಳುವಳಿಕೆಯನ್ನು ಸಭೆ ಮೂಲಕ ಮೂಡಿಸಿ ನಂತರ ಮಗುವಿನ ಆಹಾರ ಪದ್ಧತಿ ಮಗುವಿನ ರಕ್ತಹೀನತೆ ಇತಿಹಾಸದ ಬಗ್ಗೆ ಪೋಷಕರ ಮೂಲಕ ಮಾಹಿತಿ ಪಡೆದು ಸ್ಕ್ರೀನಿಂಗ್ ಮಾಡಲಾಗುವುದು ಎಂದು ವಿವರಿಸಿದರು.
ಹಿಮೋಗ್ಲೋಬಿನ್ ಸಾಮಾನ್ಯ ಮಟ್ಟಕ್ಕೆ ಸುಧಾರಿಸಿದರೆ ಚಿಕಿತ್ಸೆ ನಿಲ್ಲಿಸಲಾಗುತ್ತದೆ. ಆದರೆ, ರೋಗನಿರೋಧಕ ಐಎಫ್‌ಎ ಡೋಸ್‌ಗಳು ಮುಂದುವರಿಸಲಾಗುತ್ತದೆ. ಎರಡು ತಿಂಗಳಲ್ಲಿ ರಕ್ತಹೀನತೆ ಚಿಕಿತ್ಸೆಗೆ ಮಗು ಪ್ರತಿಕ್ರಿಸದಿದ್ದಲ್ಲಿ ಹೆಚ್ಚಿದ ತಪಾಸಣೆಗಾಗಿ ಶಿಶುವೈದ್ಯರ ಬಳಿಗೆ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಲಾಗುವುದು ಎಂದು ತಿಳಿಸಿದರು.
ಮಕ್ಕಳಲ್ಲಿ ಪೋಷಕಾಂಶದ ಕೊರತೆಯಿಂದ, ಜಂತುಹುಳು ಭಾದೆಯಿಂದ, ಸ್ವಚ್ಛತೆಗೆ ಗಮನ ಹರಿಸದೆ ಇರುವುದರಿಂದ ರಕ್ತಹೀನತೆ ಉಂಟಾಗುತ್ತದೆ. ಮಕ್ಕಳಲ್ಲಿ ಸುಸ್ತು, ತಲೆ ಸುತ್ತುವಿಕೆ, ಕೈ ಕಾಲು ಸೆಳೆಯುವಿಕೆ, ಏಕಾಗ್ರತೆಯ ಕೊರತೆ, ಹಸಿವಾಗದೆ ಇರುವುದು ಇವೆಲ್ಲ ತೊಂದರೆಗಳಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ತಿಳಿಸಿದರು.
ಪೋಷಕರ ಒಪ್ಪಿಗೆ ಪಡೆದು ೩೫ ಮಕ್ಕಳ ಅನಿಮಿಯಾ ತಪಾಸಣೆಯನ್ನು ವೈದ್ಯಾಧಿಕಾರಿ ಶೈಮಾ, ಆರೋಗ್ಯ ಕಾರ್ಯಕರ್ತೆ ಮಮತಾ ನಡೆಸಿದರು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಉಮಾವತಿ, ಸಹಾಯಕಿ ದೈವಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net