ಬಿಟ್ಟಂಗಾಲದ ಕ್ರೇಡೋ ಆಯುರ್ವೇದ ಕೇಂದ್ರದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಾ. ಗೋಪಿನಾಥ್, ಅಂಬಿ ಕೃಷ್ಣಮೂರ್ತಿ, ಪೌಲ್ ಕ್ಷೆವಿಯರ್, ಎಂ.ಎಂ.ಸುರೇಶ್, ವೈದ್ಯರಾದ ರಕ್ಷ, ಅಭಿಜಿತ್ ಇತರರು ಇದ್ದರು.
ವಿರಾಜಪೇಟೆ: ವಿರಾಜಪೇಟೆ ಲಯನ್ಸ್ ಕ್ಲಬ್, ನಾರಾಯಣ ಆಸ್ಪತ್ರೆ ಮೈಸೂರು, ಕ್ರೇಡೋ ಮೆಡಿಕೇರ್ ವತಿಯಿಂದ ಬಿಟ್ಟಂಗಾಲದ ಕ್ರೇಡೋ ಆಯುರ್ವೇದ ಕೇಂದ್ರದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.
ಸರ್ಕಾರಿ ಆಸ್ಪತ್ರೆಯ ನಿವೃತ್ತ ಮೂಳೆ ತಜ್ಞರು, ಲಯನ್ಸ್ ಕ್ಲಬ್‌ನ ಸದಸ್ಯರಾದ ಡಾ. ಗೋಪಿನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಾನು ಈ ಹಿಂದೆ ವಿರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ವೇಳೆ ಎಲ್ಲರೂ ತೋರಿದ ಪ್ರೀತಿ ದೊಡ್ಡದು. ಈ ಕಾರಣದಿಂದಲೇ ಕೊಡಗಿಗೆ ಮೂರು ತಿಂಗಳಿಗೊಮ್ಮೆ ಬಂದು ನನ್ನ ಸೇವೆ ಸಲ್ಲಿಸುತ್ತೇನೆ. ಆರೋಗ್ಯ ತಪಾಸಣಾ ಉಚಿತ ಶಿಬಿರಗಳನ್ನು ಗ್ರಾಮೀಣ ಭಾಗಗಳಲ್ಲಿ ಆಯೋಜಿಸಬೇಕು. ಜನರೂ ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿರಾಜಪೇಟೆ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಅಂಬಿ ಕೃಷ್ಣಮೂರ್ತಿ, ಕಾರ್ಯದರ್ಶಿ ಪೌಲ್ ಕ್ಷೆವಿಯರ್, ಖಜಾಂಚಿ ಎಂ.ಎಂ.ಸುರೇಶ್, ವೈದ್ಯರಾದ ರಕ್ಷ, ಅಭಿಜಿತ್, ಕ್ಲಬ್ ಸದಸ್ಯರು, ಮೈಸೂರಿನ ನಾರಾಯಣ ಆಸ್ಪತ್ರೆ, ಕ್ರೇಡೋ ಆಯುರ್ವೇದ ಔಷಧ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.