ಸೋಮವಾರಪೇಟೆ: ಇನ್ನರ್ ವ್ಹೀಲ್ ಕ್ಲಬ್ ಸೋಮವಾರಪೇಟೆ ಗೋಲ್ಡ್, ಮಹಿಳಾ ಸಹಕಾರ ಸಂಘ, ಜೇಸಿಐ ಸೋಮವಾರಪೇಟೆ ಮತ್ತು ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ಸಹಯೋಗದಲ್ಲಿ ಏ.19ರಂದು ಮಹಿಳಾ ಸಮಾಜದ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಇನ್ನರ್‌ವ್ಹೀಲ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.