ಮಡಿಕೇರಿಯ ಹಾಸಿನಿ ಸಿಂಗ್ ರಜಪೂತ್ ಇಂಗೀಷ್ ಎಂಎ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು. ಮಡಿಕೇರಿಯಲ್ಲಿ ಉದ್ಯಮಿಯಾಗಿರುವ ಪ್ರದೀಪ್ ಕುಮಾರ್ ಸಿಂಗ್ ರಜಪೂತ್ ಮತ್ತು ಮಹಾಲಕ್ಷಿö್ಮà ದಂಪತಿ ಪುತ್ರಿಯಾಗಿರುವ ಹಾಸಿನಿ ಸಿಂಗ್ ರಜಪೂತ್ ಶಾಲಾ ದಿನಗಳಿಂದಲೂ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯ, ಅಂತಾರಾಜ್ಯ ಮಟ್ಟದ ಶೈಕ್ಷಣಿಕ ಸ್ಪರ್ಧೆಗಳು, ರಾಷ್ಟಿçÃಯ ಮಟ್ಟದ ಸೆಮಿನಾರ್‌ಗಳಲ್ಲೂ ಪಾಲ್ಗೊಂಡಿದ್ದಾರೆ.