ಸಂಭ್ರಮದ ಹಗಲು ಸುಗ್ಗಿ ಉತ್ಸವ

ಸೋಮವಾರಪೇಟೆ ಸಮೀಪದ ಯಡೂರು ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಸಬ್ಬಮ್ಮ ಹಗಲು ಸುಗ್ಗಿ ಉತ್ಸವದಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು. ಲೋಕೇಶ್, ಮುತ್ತಣ್ಣ, ಸುಧೀರ್ ಇದ್ದರು.
ಸೋಮವಾರಪೇಟೆ ಸಮೀಪದ ಯಡೂರು ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಸಬ್ಬಮ್ಮ ಹಗಲು ಸುಗ್ಗಿ ಉತ್ಸವದಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು. ಲೋಕೇಶ್, ಮುತ್ತಣ್ಣ, ಸುಧೀರ್ ಇದ್ದರು.
Published on
ಸೋಮವಾರಪೇಟೆ: ಸಮೀಪದ ಯಡೂರು ಗ್ರಾಮದ ಶ್ರೀ ಸಬ್ಬಮ್ಮ ದೇವಿಯ ಹಗಲು ಸುಗ್ಗಿ ಉತ್ಸವ ಸೋಮವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಸುಗ್ಗಿ ಉತ್ಸವ ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ರೈತರ ಪರಿಶ್ರಮವನ್ನು ಸ್ಮರಿಸುವ ಹಬ್ಬವಾಗಿದೆ. ಭೂಮಾತೆಯ ಕೃಪೆಯಿಂದ ಬೆಳೆದ ಬೆಳೆಗಾಗಿ ಕೃತಜ್ಞತೆ ಸಲ್ಲಿಸುವ ಈ ಹಬ್ಬವು ನಮ್ಮ ಏಕತೆ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ ಎಂದು ಹೇಳಿದರು.
ರೈತರು ದೇಶದ ಬೆನ್ನೆಲುಬು. ಅವರ ಪರಿಶ್ರಮವೇ ನಮ್ಮ ಸಮೃದ್ಧಿಯ ಮೂಲ. ಇಂತಹ ಹಬ್ಬಗಳು ನಮ್ಮ ಸಂಸ್ಕೃತಿಯನ್ನು ಉಳಿಸಿ, ಮುಂದಿನ ತಲೆಮಾರಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಎಲ್ಲರೂ ಒಗ್ಗೂಡಿ ಸಂಭ್ರಮದಿಂದ ಸುಗ್ಗಿ ಹಬ್ಬವನ್ನು ಆಚರಿಸಿ, ಸಹಕಾರ ಮತ್ತು ಸೌಹಾರ್ದತೆ ಬೆಳೆಸಬೇಕಿದೆ. ನಮ್ಮ ಹಿಂದಿನ ಆಚಾರ, ವಿಚಾರಗಳನ್ನು ಮುಂದುವರಿಸಿಕೊಂಡು ಹೋಗಲು ನಾವು ಹಬ್ಬಗಳನ್ನು ಹಿಂದಿನಂತೆ ಮುಂದುವರಿಸಿಕೊಂಡು ಹೋಗಬೇಕಿದೆ. ಇದರಿಂದ ನಮ್ಮ ಮಕ್ಕಳಿಗೂ ಸಂಸ್ಕೃ, ಇತಿಹಾಸ ತಿಳಿಯಲು ಅವಕಾಶವಾಗುವುದು. ಈಗಾಗಲೇ ಸುಗ್ಗಿಕಟ್ಟೆ ಅಭಿವೃದ್ಧಿಗೆ ಶಾಸಕರ ನಿಧಿಯಿಂದ 10 ಲಕ್ಷ ರೂ.ನೀಡಿದ್ದು, ಮುಂದಿನ ದಿನಗಳಲ್ಲಿಯೂ ಅಭಿವೃದ್ಧಿ ಕೆಲಸಗಳಿಗೆ ಹಣಕಾಸು ನೆರವು ಒದಗಿಸಲಾಗುವುದು ಎಂದರು.
ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ.ಲೋಕೇಶ್, ಯಡೂರು ಗ್ರಾಮಾಭಿವೃದ್ಧಿ ಮಂಡಳಿ ನಿಯೋಜಿತ ಅಧ್ಯಕ್ಷ ಡಿ.ಡಿ.ಮುತ್ತಣ್ಣ, ಕಾರ್ಯದರ್ಶಿ ಸುಧೀರ್, ಉಪಾಧ್ಯಕ್ಷ ಲೋಕೇಶ್, ದೇವರ ಒಡೆಕಾರರು ಸುಗ್ಗಿ ಉತ್ಸವದ ಜವಾಬ್ದಾರಿ ವಹಿಸಿದ್ದರು. ಮಂಗಳವಾರ ಮಾರಿ ಕಳುಹಿಸುವ ಕಾರ್ಯದೊಂದಿಗೆ 13 ದಿನಗಳ ಸುಗ್ಗಿ ಉತ್ಸವ ಮುಕ್ತಾಯಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net