ಕುಲ್ಲಚೆಟ್ಟಿ ಕುಟುಂಬದಲ್ಲಿ ಹರಿಸೇವೆ ಆಚರಣೆ

ಕೆದಮುಳ್ಳೂರು ಗ್ರಾಮದ ಕುಲ್ಲಚೆಟ್ಟಿ ಕುಟುಂಬಸ್ಥರು ಮೂರು ವರ್ಷಗಳೊಮ್ಮೆ ನಡೆಸುವ ಹರಿಸೇವೆ ಹಾಗೂ 101 ಕೋಲದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಕೆದಮುಳ್ಳೂರು ಗ್ರಾಮದ ಕುಲ್ಲಚೆಟ್ಟಿ ಕುಟುಂಬಸ್ಥರು ಮೂರು ವರ್ಷಗಳೊಮ್ಮೆ ನಡೆಸುವ ಹರಿಸೇವೆ ಹಾಗೂ 101 ಕೋಲದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
Published on
ಗೋಣಿಕೊಪ್ಪಲು:
ಕೆದಮುಳ್ಳೂರು ಗ್ರಾಮದ ಕುಲ್ಲಚೆಟ್ಟಿ ಕುಟುಂಬಸ್ಥರು ಮೂರು ವರ್ಷಗಳೊಮ್ಮೆ ನಡೆಸುವ ಹರಿಸೇವೆ ಹಾಗೂ 101 ಕೋಲ ಎರಡು ದಿನಗಳ ದಾರ್ಮಿಕ ವಿಧಿವಿಧಾನಗಳು ಬುಧವಾರ ಮತ್ತು ಗುರುವಾರ ನಡೆದವು. ಬುಧವಾರ ಕುಲ್ಲಚೆಟ್ಟಿ ಐನ್‌ಮನೆಯಲ್ಲಿ ಬೆಳಗ್ಗೆ ವೆಂಕಟರಮಣ ದೇವರ ಹರಿಸೇವೆ, ಪೂಜಾ ಕಾರ್ಯಗಳು ನಡೆಯಿತು. ವೆಂಕಟರಮಣ ಮತ್ತು ಕೆಂಚರಾಯ ದೇವ ದರ್ಶನ ನಡೆಯಿತು. ವೆಂಕಟರಮಣ ಹರಿ ಸೇವೆಯ ಪೂಜೆಯನ್ನು ದಾಸ ಹರೀಶ್ ನಡೆಸಿದರು.
ಸಂಜೆ ಅರೆಭಾಷೆ ಗೌಡ ಜನರ ಪ್ರಮುಖ ದೈವವಾದ ಬಚ್ಚನಾಯಕ ಆರಾಧನೆ ಮತ್ತು ಕೋಲ, ಜತೆಗೆ ಹುಲಿ ಚಾಮುಂಡಿ, ಇತರೆ ಶ್ರೀ ಧರ್ಮ ದೇವತೆಗಳು, ಕೋಲಗಳು ನಡೆಯಿತು.
ಎರಡನೇ ದಿನವಾದ ಗುರುವಾರ ಧರ್ಮ ದೇವತೆ, ಸೀರಾಡಿ ದೈವದ ಕೋಲ ನಡೆಯಿತು. ಮೂರನೇ ದಿನ 17 ರಂದು, ಪಾಷಣಮೂರ್ತಿ, ಪಂಜುರ್ಲಿ ಸೇರಿದಂತೆ ಹಲವು ಕೋಲಗಳು ನಡೆಯಲಿದೆ.
ಕುಲ್ಲಚೆಟ್ಟಿ ಕುಟುಂಬಸ್ಥರ ಪಟ್ಟೆದಾರ ಮಾಚಯ್ಯ, ಪೂವಯ್ಯ ಮತ್ತು ಹಿರಿಯರುಗಳಾದ, ಕಾರ್ಯಪ್ಪ, ಚಂದ್ರಶೇಖರ್, ತಿಮ್ಮಯ್ಯ, ಈಶ್ವರ್, ಕಿರಣ್ ಉತ್ತಪ್ಪ, ದಿನೇಶ್ ಉತ್ತಪ್ಪ, ಅಪ್ಪಾಜಿ ದೇವಯ್ಯ, ಜಯಪೂಣಚ್ಚ, ಬೊಪ್ಪಿಗಣೇಶ್, ಸೇರಿದಂತೆ ಗ್ರಾಮಸ್ಥರು, ಕುಟುಂಬದ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net