ಯಾವುದೇ ಕೆಲಸವಿರಲಿ ಪರಿಶ್ರಮದಿಂದ ಫಲ

ಸೋಮವಾರಪೇಟೆ ಚೌಡ್ಲು ಗ್ರಾಮದ ಸಾಂದೀಪನಿ ಅಂಗ್ಲ ಮಾದ್ಯಮ ಶಾಲಾ ಆವರಣದಲ್ಲಿ ಅರೆಭಾಷೆ ಗೌಡ ಸಮಾಜದ ವತಿಯಿಂದ ನಡೆದ ನಮ್ಮವರ ಸಂತೋಷಕೂಟ ಕಾರ್ಯಕ್ರಮದಲ್ಲಿ ಸಾಧಕ ಡಾ. ಮೋನಿಶ್ ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು. ಉತ್ತಯ್ಯ, ಲಿಖಿತ್, ರಾಮಣ್ಣ, ಚಂಗಪ್ಪ ಇತರರು ಇದ್ದರು.
ಸೋಮವಾರಪೇಟೆ ಚೌಡ್ಲು ಗ್ರಾಮದ ಸಾಂದೀಪನಿ ಅಂಗ್ಲ ಮಾದ್ಯಮ ಶಾಲಾ ಆವರಣದಲ್ಲಿ ಅರೆಭಾಷೆ ಗೌಡ ಸಮಾಜದ ವತಿಯಿಂದ ನಡೆದ ನಮ್ಮವರ ಸಂತೋಷಕೂಟ ಕಾರ್ಯಕ್ರಮದಲ್ಲಿ ಸಾಧಕ ಡಾ. ಮೋನಿಶ್ ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು. ಉತ್ತಯ್ಯ, ಲಿಖಿತ್, ರಾಮಣ್ಣ, ಚಂಗಪ್ಪ ಇತರರು ಇದ್ದರು.
Published on
ಸೋಮವಾರಪೇಟೆ: ಅರೆಭಾಷೆ ಗೌಡ ಸಮಾಜದ ವತಿಯಿಂದ ನಮ್ಮವರ ಸಂತೋಷಕೂಟ ಕಾರ್ಯಕ್ರಮ ಚೌಡ್ಲು ಗ್ರಾಮದ ಸಾಂದೀಪನಿ ಅಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ದಂಡಿನ ಉತ್ತಯ್ಯ ಮಾತನಾಡಿ, ಯಾವುದೇ ಕೆಲಸದಲ್ಲಿ ಪರಿಶ್ರಮವಿದ್ದರೆ ಮಾತ್ರ ಫಲ ಸಿಗುವುದು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲೇಬೇಕಿದೆ. ವಿದ್ಯೆಯಿಂದ ಮಾತ್ರ ದೊಡ್ಡ ಸಾಧನೆ ಮಾಡಬಹುದು. ಸಮಾಜ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದುವ ದಿಸೆಯಲ್ಲಿ ಎಲ್ಲರೂ ಚಿಂತನೆ ಮಾಡಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮೂಡಗದ್ದೆ ಲಿಖಿತ್ ದಾಮೋದರ್, ಪ್ರಗತಿಪರ ಕೃಷಿಕ ಅಜಿರಂಗಲ ರಾಮಣ್ಣ, ಉಪಾಧ್ಯಕ್ಷ ಮುಕ್ಕಾಟಿ ಚಂಗಪ್ಪ, ಖಜಾಂಚಿ ಕುದುಕುಳಿ ಗಜೇಂದ್ರ, ಮಾಜಿ ಅಧ್ಯಕ್ಷ ಸೂದನ ಸೋಮಣ್ಣ, ಕಾರ್ಯದರ್ಶಿ ನಂಗಾರು ಟಿ.ವಸಂತ, ಕುದುಕುಳಿ ಚಂದ್ರಕಲಾ ಭೋಜರಾಜ್, ಚಿಲ್ಲನ ನಂದ, ಮೂಲೆಮಜಲು ಪೂರ್ಣಿಮಾ, ಕುಟ್ಟನ ಅನಿಲ್ ಇತರರು ಇದ್ದರು.

ಕಾರ್ಯಕ್ರಮದ ಪ್ರಯುಕ್ತ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಓಟ ಸ್ಪರ್ಧೆ, ಪುರುಷರಿಗೆ, ಮಹಿಳೆಯರಿಗೆ ಹಗ್ಗ ಜಗ್ಗಾಟ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು. ಇದೇ ಸಂದರ್ಭ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ ದಂಡಿನ ಡಾ. ಮೋನಿಶ್ ಉತ್ತಯ್ಯ ಅವರನ್ನು ಗೌರವಿಸಲಾಯಿತು. ಮಕ್ಕಳಿಂದ ಸಂಗೀತ, ನೃತ್ಯ ಸೇರಿದಂತೆ ಇತರ ಮನರಂಜನೆ ಕಾರ್ಯಕ್ರಮಗಳು ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net