ಹರದೂರು - ಕಾಜೂರು ಉರೂಸ್‌ಗೆ ಚಾಲನೆ

ಹರದೂರು - ಕಾಜೂರು ಉರೂಸ್‌ಗೆ ಮಸ್ಜಿದುನ್ನೂರ್ ಮಸೀದಿಯ ಧರ್ಮಗುರು ಅಬ್ದುಲ್ ಹಕೀಂ ಅನ್ವಾರಿ ಚಾಲನೆ ನೀಡಿದರು. ಎಂ.ಎ. ಮುಸ್ತಫಾ, ಅಬ್ದುಲ್ಲಾ, ಅಜೀಜ್, ಜಕ್ರಿಯಾ, ಯಾಕೂಬ್ ಮತ್ತಿತರರು ಇದ್ದರು.
ಹರದೂರು - ಕಾಜೂರು ಉರೂಸ್‌ಗೆ ಮಸ್ಜಿದುನ್ನೂರ್ ಮಸೀದಿಯ ಧರ್ಮಗುರು ಅಬ್ದುಲ್ ಹಕೀಂ ಅನ್ವಾರಿ ಚಾಲನೆ ನೀಡಿದರು. ಎಂ.ಎ. ಮುಸ್ತಫಾ, ಅಬ್ದುಲ್ಲಾ, ಅಜೀಜ್, ಜಕ್ರಿಯಾ, ಯಾಕೂಬ್ ಮತ್ತಿತರರು ಇದ್ದರು.
Published on
ಸುಂಟಿಕೊಪ್ಪ:
ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದೂರು - ಕಾಜೂರು ಉರೂಸ್‌ಗೆ ಮಸ್ಜಿದುನ್ನೂರ್ ಮಸೀದಿಯ ಧರ್ಮಗುರು ಅಬ್ದುಲ್ ಹಕೀಂ ಅನ್ವಾರಿ ಶುಕ್ರವಾರ ಚಾಲನೆ ನೀಡಿದರು. ಕಾಜೂರು ಉರೂಸ್ ಮಕಾಂನಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು, ಉರೂಂ ಯಶಸ್ವಿಯಾಗಿ ನಡೆಯಲು ಪ್ರಾರ್ಥಿಸಿದರು.
ಸ್ವಲಾತ್ ಕಮಿಟಿ ಅಧ್ಯಕ್ಷ ಸುಲೈಮಾನ್ ಸಖಾಫಿ ಮಾತನಾಡಿ ಉರೂಸ್‌ಗೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಸೋಮವಾರ (ಏ.6) ಸಮಾರೋಪ ಸಮಾರಂಭ ನಡೆಯಲಿದೆ. ಎಲ್ಲರೂ ಉರೂಸ್‌ನಲ್ಲಿ ಭಾಗವಹಿಸುವ ಮೂಲಕ ಉರೂಸನ್ನು ಯಶಸ್ವಿಗೊಳಿಸಬೇಕು ಎಂದರು.
ಹರದೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎ. ಮುಸ್ತಫಾ ಮಾತನಾಡಿ, ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕಾಜೂರು ಮಕಾಂ ಉರೂಸ್‌ಗೆ ಚಾಲನೆ ನೀಡಲಾಗಿದೆ. ಉರೂಸ್‌ನಲ್ಲಿ ಕೊಡಗಿನ ಎಲ್ಲಾ ಕಡೆಗಳಿಂದಲೂ ಜನರು ಪಾಲ್ಗೊಳ್ಳುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಉರೂಸ್ ನ ಯಶಸ್ವಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭ ಮಸ್ಜಿದುನ್ನೂರು ಮುಸ್ಲಿಂ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ಲಾ, ಕಾರ್ಯದರ್ಶಿ ಅಜೀಜ್, ಖಜಾಂಜಿ ಜಕ್ರಿಯಾ, ಪ್ರಮುಖರಾದ ಯಾಕೂಬ್, ಉಮರ್ ಹಾಜಿ, ಸೈದು, ರಜಾಕ್, ಕಾದರ್, ಸಿದ್ದೀಕ್, ಕೆ.ಬಿ. ಶಂಶುದ್ದೀನ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net