ಹನುಮೋತ್ಸವ ಆಚರಣೆ ಇಂದಿನಿಂದ

ಹನುಮೋತ್ಸವ ಆಚರಣೆ
ಹನುಮೋತ್ಸವ ಆಚರಣೆ
Published on
ತಿತಿಮತಿ ಗ್ರಾಮದಲ್ಲಿ ವೈವಿಧ್ಯಮಯ ಆಚರಣೆ
ಗೋಣಿಕೊಪ್ಪಲು : ತಿತಿಮತಿ ಹನುಮೋತ್ಸವ ಸಮಿತಿ, ರಾಮ ಮಂದಿರ ಸಮಿತಿಯು
ಎರಡನೇ ವರ್ಷದ ಹನುಮೋತ್ಸವ ಕಾರ್ಯಕ್ರಮವನ್ನು ತಿತಿಮತಿ ಗ್ರಾಮದಲ್ಲಿ
ಹಮ್ಮಿಕೊಳ್ಳಲಾಗಿದೆ. ಡಿ.2ರಿಂದ ಆರು ದಿನಗಳ ಕಾಲ ಉತ್ಸವ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹನುಮನ ಆರಾಧನೆ, ಶ್ಲೋಕ ಪಠಣ, ಸಾಹಸ ಪ್ರದರ್ಶನ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಈ ಸಂದರ್ಭ ಆಯೋಜನೆಗೊಂಡಿವೆ. ಡಿ. 2ರಂದು ಹನುಮ ಮಾಲಾಧಾರಣೆ, ಆಂಜನೇಯ ಹೋಮ, 3ರಂದು ಪೂಜೆ ಹಾಗೂ ಹನುಮಂತನ ಭಜನೆ ನಡೆಯಲಿವೆ. ಡಿ. 6 ರ ಬೆಳಗ್ಗೆ ಗುಂಡು ಎಸೆತ, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ.
ಅಂದು ಸಂಜೆ 6ಕ್ಕೆ ದೀಪೋತ್ಸವ ಮತ್ತು ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು. ಡಿ.7 ರ ಮಧ್ಯಾಹ್ನ 2 ಗಂಟೆಗೆ ಹನುಮ ಉತ್ಸವ,
ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಈ ಸಂದರ್ಭ ಬಾಳುಮನಿ ಗಣಪತಿ ದೇವಸ್ಥಾನದಿಂದ ತಿತಿಮತಿ ರಾಮ ಮಂದಿರದವರೆಗೆ, ಭಜನೆ ಕುಣಿತ, ಡೊಳ್ಳು ಕುಣಿತ, ಚಂಡೆ ವಾದ್ಯ ಸಹಿತ ಯಾತ್ರೆ ನಡೆಯಲಿದೆ. ಬೆಂಗಳೂರಿನ ವಿಶ್ವ ಹಿಂದು ಪರಿಷತ್ ಕ್ಷೇತ್ರೀಯ ಧರ್ಮ ಪ್ರಸಾರ ಪ್ರಮುಖ್ ಸೂರ್ಯನಾರಾಯಣ ಅವರು ಈ ಸಂದರ್ಭ ಧರ್ಮದ ಪ್ರಾಮುಖ್ಯತೆ ಬಗ್ಗೆ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು. ಸಮಿತಿ ಕಾರ್ಯದರ್ಶಿ ಪಾಲೆಂದರ ಮನು ನಂಜಪ್ಪ, ಸದಸ್ಯರಾದ ಪಿ.ಎನ್ ರವಿ, ಮಂಜುನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net