ಶಾಲಾ ಆವರಣಕ್ಕೆ ಆಗಮಿಸಿದ ವಿಜೇತ ಕ್ರೀಡಾಪಟುಗಳನ್ನು ಬ್ಯಾಂಡ್‌ನೊAದಿಗೆ ಪ್ರಾಂಶುಪಾಲರು, ಆಡಳಿತ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿ,ವಿದ್ಯಾರ್ಥಿನಿಯರು, ಪೋಷಕರು ಹಾಗೂ ಹಾಕಿ ಕೋಚ್‌ಗಳು ಸ್ವಾಗತಿಸಿದರು. ದಕ್ಷಿಣ ವಲಯ ಪಂದ್ಯಾವಳಿಯಲ್ಲಿ ಗಳಿಸಿದ ಟ್ರೋಫಿಯನ್ನು ಕ್ರೀಡಾಪಟುಗಳು ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ ಅವರಿಗೆ ಹಸ್ತಾಂತರಿಸಿದರು.