ಕಾರ್ಯದರ್ಶಿ ಯಶವಂತ್ ಕೇಟೋಳಿ ಮಾತನಾಡಿ ಚೇರಂಬಾಣೆ ಗೌಡ ಸಮಾಜ ಹಾಗೂ ಚೇರಂಬಾಣೆ ಗೌಡ ಯುವ ವೇದಿಕೆಯ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ 3ರಿಂದ 5 ರವರೆಗೆ ನಡೆಯಲಿದೆ. ಚೇರಂಬಾಣೆ ಅರುಣ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಬೆಟ್ಟಗೇರಿ, ಆವಂದೂರು, ಅರವತ್ತೊಕ್ಲು, ಅಪ್ಪಂಗಳ, ತಾಳತ್ತಮನೆ, ಕಾರುಗುಂದ, ಕಡಿಯತ್ತೂರು, ಕೊಟ್ಟೂರು, ಬಕ್ಕ, ಬೆಟ್ಟತ್ತೂರು, ಕೊಳಗದಾಳು, ಚೇರಂಬಾಣೆ, ಬೇಂಗೂರು, ಬಿ.ಬಾಡಗ, ಕೋಪಟ್ಟಿ, ಚರಂದೆಟ್ಟಿ, ಸಿಂಗತ್ತೂರು, ಕೋರಂಗಾಲ, ಭಾಗಮಂಡಲ, ಕರಿಕೆ, ಸಣ್ಣ ಪುಲಿಕೋಟು, ದೊಡ್ಡ ಪುಲಿಕೋಟು, ಮರಗೋಡು, ಕಾಂತೂರು, ಬಿಳಿಗೇರಿ, ಮೇಕೇರಿ, ಮಡಿಕೇರಿ, ಮೂರ್ನಾಡು, ನಾಪೋಕ್ಲು, ಹೊದ್ದೂರು, ಕುಂಬಳದಾಳು ಗ್ರಾಮಗಳ ಗೌಡ ಜನಾಂಗದ ಆಟಗಾರರಿಗೆ ಬಿಡ್ಡಿಂಗ್ ಆಧಾರದಲ್ಲಿ ಸ್ಪರ್ಧಿಸಲು ಅವಕಾಶವಿದೆ ಎಂದು ತಿಳಿಸಿದರು.