ಯಶಸ್ವಿಯಾಗಿ ನಡೆದ ಗೌಡ ವಧು ವರರ ಸಮಾವೇಶ

ಬೆಂಗಳೂರು ಕೊಡಗು ಗೌಡ ಸಮಾಜದ ವತಿಯಿಂದ ನಡೆದ ವಧು-ವರರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ನಂಗಾರು ನಿಂಗರಾಜು, ನಿವೃತ್ತ ವಿಂಗ್ ಕಮಾಂಡರ್ ಅಯ್ಯೆಟ್ಟಿ ಮನೋಜ್ ಕುಮಾರ್, ಆಶಾ ಕಾಚಿಲಂಡ, ಕವಿತಾ ಕಡ್ಯದ, ತರುಣ್ ಕೂಡಕಂಡಿ ಮತ್ತಿತರರು ಇದ್ದರು.

Published on
ಮಡಿಕೇರಿ:
ಬೆಂಗಳೂರು ಕೊಡಗು ಗೌಡ ಸಮಾಜದ ವತಿಯಿಂದ ಮಹಿಳಾ ಘಟಕ ಹಾಗೂ ಯುವ ವೇದಿಕೆಯ ಸಹಯೋಗದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ವಧು-ವರರ ಸಮಾವೇಶ ಈಚೆಗೆ ಯಶಸ್ವಿಯಾಗಿ ನಡೆಯಿತು. ಬೆಂಗಳೂರು ಕೊಡಗು ಗೌಡ ಸಮಾಜದಲ್ಲಿ ನಡೆದ ಸಮಾವೇಶದಲ್ಲಿ 90ಕ್ಕೂ ಹೆಚ್ಚು ವಧು-ವರ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.
ಪೋಷಕರೊಂದಿಗೆ ಆಗಮಿಸಿದ್ದ ದೇಶ-ವಿದೇಶಗಳಲ್ಲಿ ನೆಲೆಸಿರುವ ಹಲವು ಅಭ್ಯರ್ಥಿಗಳು ಸಮುದಾಯದೊಳಗೆ ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ತೋರಿದರು.
ಕಾರ್ಯಕ್ರಮವನ್ನು ಹಿರಿಯರಾದ ನಂಗಾರು ನಿಂಗರಾಜು ಉದ್ಘಾಟಿಸಿ ಮಾತನಾಡಿ ಯುವಜನತೆಗೆ ಜೀವನ ಸಂಗಾತಿಯ ಆಯ್ಕೆಯ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು. ಈ ಸಮಾವೇಶ ಸಮುದಾಯದ ಯುವಕ-ಯುವತಿಯರಿಗೆ ಹಾಗೂ ಅವರ ಕುಟುಂಬಗಳಿಗೆ ಪರಸ್ಪರ ಪರಿಚಯ ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು. ಕೊಡಗು ಗೌಡ ಸಮಾಜದ ಅಧ್ಯಕ್ಷ ನಿವೃತ್ತ ವಿಂಗ್ ಕಮಾಂಡರ್ ಅಯ್ಯೆಟ್ಟಿ ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಘಟಕದ ಅಧ್ಯಕ್ಷೆ ಆಶಾ ಕಾಚಿಲಂಡ, ಕಾರ್ಯದರ್ಶಿ ಕವಿತಾ ಕಡ್ಯದ, ತರುಣ್ ಕೂಡಕಂಡಿ, ಕಲಾ ದೇವಜನ, ನೂತನ್ ಚೆಟ್ಟಿಮಾಡ, ಜಗದೀಶ್ ಬೊಳ್ಳೂರು ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net