ಗೋಷಿಕ್‌ಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೌರವ

ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ 2026ರ ಐಬಿಆರ್ ಸಾಧಕ ಬಿ.ಎಸ್. ಗೋಷಿಕ್
ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ 2026ರ ಐಬಿಆರ್ ಸಾಧಕ ಬಿ.ಎಸ್. ಗೋಷಿಕ್
Published on
ನಾಪೋಕ್ಲು: ಹೊಸಕೋಟೆ ಗ್ರಾಮದ ಬಿ.ಎಸ್.ಗೋಷಿಕ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ 2026ರ ಐಬಿಆರ್ ಸಾಧಕ ಗೌರವಕ್ಕೆ ಪಾತ್ರರಾಗಿದ್ದಾರೆ.
ವಿರಾಜಪೇಟೆ ತಾಲೂಕಿನ ಹೊಸಕೋಟೆ ಗ್ರಾಮದ ಬಾರಿಕೆ ಶ್ರೀಕಾಂತ್ ಹಾಗೂ ದಿವ್ಯಜೋತಿ ಅವರ ಪುತ್ರ ತನ್ನ 2 ವರ್ಷ 5 ತಿಂಗಳ ವಯಸ್ಸಿನಲ್ಲಿ 8 ಹಣ್ಣುಗಳು, 5 ತರಕಾರಿಗಳು, 7 ಪಕ್ಷಿಗಳು, 7 ಸಾಕು ಪ್ರಾಣಿಗಳು, 5 ಕಾಡು ಪ್ರಾಣಿಗಳು, 4 ಜಲಚರಗಳು, 3 ಕೀಟಗಳು, 10 ವಾಹನಗಳು, ದೇಹದ 12 ಅಂಗಗಳು, 3 ಸರಿಸೃಪಗಳು, 10 ಕ್ರಿಯೆಗಳು ಹಾಗೂ 16 ಉಡುಪುಗಳ ಹೆಸರನ್ನು ಗುರುತಿಸಿ ಹೇಳುವಲ್ಲಿ ಯಶಸ್ವಿಯಾಗಿದ್ದಾನೆ. ಇದರ ಜತೆಗೆ ಇಂಗ್ಲಿಷ್ ಅಕ್ಷರ ಮಾಲೆಯನ್ನು ಹೇಳುವುದು, 5 ವಾಹನಗಳ ಮತ್ತು 4 ಪ್ರಾಣಿಗಳ ಶಬ್ದಗಳನ್ನು ಅನುಕರಿಸುವ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿರುವುದಕ್ಕಾಗಿ, ಅವರಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ 2026ರ ಐಬಿಆರ್ ಸಾಧಕ ಗೌರವ ಎಂಬ ಗೌರವ ನೀಡಿ 2026ರ ಏಪ್ರಿಲ್ 21 ರಂದು ದೃಢೀಕರಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net