ಪುಟಾಣಿಗಳಿಗೆ ಹೊರಸಂಚಾರ ಭಾಗ್ಯ

ವೀರ ಬಾಲ ದಿವಸ್ ಕಾರ್ಯಕ್ರಮ ಅಂಗವಾಗಿ ಗಾಳಿಬೀಡು ಅಂಗನವಾಡಿ ಕೇಂದ್ರದ ಮಕ್ಕಳನ್ನು ಅಮೃತ ಸರೋವರ ಚಪ್ಪಂಡ ಕೆರೆಗೆ ಹೊರ ಸಂಚಾರ ಕರೆದುಕೊಂಡು ಹೋಗಲಾಯಿತು. ಮೇಪಾಡಂಡ ಸವಿತಾ ಕೀರ್ತನ್, ವೈ. ಜಯಂತಿ, ಧರಣಿ ಇದ್ದರು.
ವೀರ ಬಾಲ ದಿವಸ್ ಕಾರ್ಯಕ್ರಮ ಅಂಗವಾಗಿ ಗಾಳಿಬೀಡು ಅಂಗನವಾಡಿ ಕೇಂದ್ರದ ಮಕ್ಕಳನ್ನು ಅಮೃತ ಸರೋವರ ಚಪ್ಪಂಡ ಕೆರೆಗೆ ಹೊರ ಸಂಚಾರ ಕರೆದುಕೊಂಡು ಹೋಗಲಾಯಿತು. ಮೇಪಾಡಂಡ ಸವಿತಾ ಕೀರ್ತನ್, ವೈ. ಜಯಂತಿ, ಧರಣಿ ಇದ್ದರು.
Published on
ಮಡಿಕೇರಿ:
ಸಮೀಪದ ಗಾಳಿಬೀಡು ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ವೀರ ಬಾಲ ದಿವಸ್ ಕಾರ್ಯಕ್ರಮ ನಡೆಯಿತು. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಹೊರ ಸಂಚಾರ ಕರೆದುಕೊಂಡು ಹೋಗಲಾಯಿತು. ಸ್ಥಳೀಯ ಅಮೃತ ಸರೋವರ ಚಪ್ಪಂಡ ಕೆರೆಗೆ ಭೇಟಿ ನೀಡಿದ ಮಕ್ಕಳಿಗೆ ಸ್ವಚ್ಛತೆ, ನೀರಿನ ಸದ್ಬಳಕೆ, ಸುಂದರ ಪರಿಸರದ ಅವಲೋಕನ, ವಿವಿಧ ಬಣ್ಣದ ತಾವರೆ ಹೂಗಳ ಪರಿಚಯ ಮಾಡಿಕೊಡಲಾಯಿತು. ನಂತರ ಅಂಗನವಾಡಿ ಕೇಂದ್ರದಲ್ಲಿ ಕ್ಲೀನ್ ಇಂಡಿಯಾ ಗ್ರೀನ್ ಇಂಡಿಯಾ ವಿಷಯವಾಗಿ ಚಿತ್ರಕ್ಕೆ ಬಣ್ಣಗಳನ್ನು ಹಚ್ಚುವ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಅಂಗನವಾಡಿ ಕಾರ್ಯಕರ್ತೆ ವೈ. ಜಯಂತಿ, ಧರಣಿ, ಸಹಾಯಕಿ ವಿದ್ಯಾಶ್ರೀ ಈ ಸಂದರ್ಭ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net