ಗುಡ್ ಪ್ರೈಡೇ ಪ್ರಯುಕ್ತ ಶಾಸಕ ಎ.ಎಸ್. ಪೊನ್ನಣ್ಣ ಆಶ್ರಮಗಳಿಗೆ ವಿತರಿಸಲು ಆಹಾರ ಕಿಟ್‌ಅನ್ನು ರೆ.ಫಾ. ಜೇಮ್ಸ್ ಡೊಮಿನಿಕ್, ಅವರಿಗೆ ವಿತರಿಸಿದರು. ಚಾರ್ಲ್ಸ್ ಡಿಸೋಜ , ಜೋಕಿಂ ರೋಡ್ರಿಗ್ರಸ್ಸ್ ಮತ್ತಿತರರು ಇದ್ದರು.
Published on:
Copied
Follow Us
ವಿರಾಜಪೇಟೆ: ಪಟ್ಟಣದ ಐತಿಹಾಸಿಕ ಕ್ರೈಸ್ತ ದೇವಾಲಯವಾದ ಸಂತ ಅನ್ನಮ್ಮ ಚರ್ಚ್‌ನಲ್ಲಿ ಗುಡ್ ಫ್ರೈಡೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶುಕ್ರವಾರ ಬೆಳಗ್ಗೆ ಚರ್ಚ್‌ನಲ್ಲಿ ಆರಾಧನೆ ಜರುಗಿತು. ತದನಂತರ ಸಂಜೆ ಗುಡ್ ಫ್ರೈಡೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಚರ್ಚ್‌ನಲ್ಲಿ ನಡೆಸಲಾಯಿತು.
ಶಿಲುಬೆಯ ಹಾದಿ ಕಾರ್ಯಕ್ರಮವು ಭಕ್ತಿ ಭಾವದಿಂದ ಜರುಗಿತು. ಆರಾಧನೆ, ಸಾಂಗ್ಯಗಳ ಮೂಲಕ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ತದನಂತರ ಧರ್ಮಗುರುಗಳು ಪರಮ ಪ್ರಸಾದವನ್ನು ಭಕ್ತರಿಗೆ ವಿತರಿಸಿದರು. ಧಾರ್ಮಿಕ ಕಾರ್ಯಕ್ರಮಗಳು ಸಂತ ಅನ್ನಮ್ಮ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ರೆ.ಫಾ. ಜೇಮ್ಸ್ ಡೊಮಿನಿಕ್ ನೇತೃತ್ವದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಚರ್ಚ್‌ನಲ್ಲಿ ಶನಿವಾರ ಫಾಸ್ಕ ಆಚರಣೆ ಹಾಗೂ ಭಾನುವಾರ ಈಸ್ಟರ್ ಸಂಡೇ ಆಚರಣೆಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಶಾಸಕ ಪೊನ್ನಣ್ಣರಿಂದ ಕಿಟ್ ವಿತರಣೆ: ಶುಕ್ರವಾರ ಬೆಳಗ್ಗೆ ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್‌ನಲ್ಲಿ ಕ್ರೈಸ್ತ ಸಮುದಾಯದವರ ಪ್ರಾರ್ಥನೆಯ ಬಳಿಕ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಚರ್ಚ್‌ಗೆ ಭೇಟಿ ನೀಡಿದರು.
ಯೇಸು ಕ್ರಿಸ್ತರಿಗೆ ಪುಷ್ಪಾರ್ಚನೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಗುಡ್ ಫ್ರೈಡೆ ಆಚರಣೆಯ ಪ್ರಯುಕ್ತ ಆಶ್ರಮಕ್ಕೆ ನೀಡುವ ಆಹಾರ ಸಾಮಗ್ರಿಗಳ ಕಿಟ್ ಅನ್ನು ಶಾಸಕರು ವಿತರಿಸಿದರು. ಗುಡ್ ಫ್ರೈಡೆ ಆಚರಿಸುತ್ತಿರುವ ಸಂದರ್ಭದಲ್ಲಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಚರ್ಚ್‌ನ ಪ್ರಧಾನ ಗುರುಗಳಾದ ರೆ.ಫಾ. ಜೇಮ್ಸ್ ಡೊಮಿನಿಕ್ ಅವರು ಶಾಸಕರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮರ್ವಿನ್ ಲೋಬೋ, ಮೆಲ್ರೊಯ್ ಲೋಬೋ, ಜೋಕೀಂ ರಾಡ್ರಿಗೀಸ್, ಮಾರ್ಟಿನ್, ಚಾರ್ಲ್ಸ್ ಡಿಸೋಜಾ, ರಿಯಾನ್ ಲೋಬೋ, ಜೇವಿಯರ್ ಹ್ಯಾಂಸಿ ಇದ್ದರು.