ಗೋಣಿಕೊಪ್ಪಲು ಕಾವೇರಿ ಪಿಯು ಕಾಲೇಜು ಚಾಂಪಿಯನ್

ಜಿಲ್ಲಾ ಮಟ್ಟದ ಆಹ್ವಾನಿತ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಗಳಿಸಿದÀ ಗೋಣಿಕೊಪ್ಪಲು ಕಾವೇರಿ ಪಿಯು ಕಾಲೇಜು ತಂಡ. ಎಂ.ಟಿ. ಸಂತೋಷ್, ಹರ್ಷಿತ್ ಇದ್ದರು.
ಜಿಲ್ಲಾ ಮಟ್ಟದ ಆಹ್ವಾನಿತ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಗಳಿಸಿದÀ ಗೋಣಿಕೊಪ್ಪಲು ಕಾವೇರಿ ಪಿಯು ಕಾಲೇಜು ತಂಡ. ಎಂ.ಟಿ. ಸಂತೋಷ್, ಹರ್ಷಿತ್ ಇದ್ದರು.
Published on
ಗೋಣಿಕೊಪ್ಪಲು:
ಕುಶಾಲನಗರ ಫಾತಿಮಾ ಪಿಯು ಕಾಲೇಜು ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆಹ್ವಾನಿತ ಹ್ಯಾಂಡ್‌ಬಾಲ್ ಪಂದ್ಯಾವಳಿಯ ಫೈನಲ್‌ನಲ್ಲಿ ಆತಿಥೇಯ ಫಾತಿಮಾ ಪಿಯು ಕಾಲೇಜು ತಂಡವನ್ನು 7-2 ಗೋಲುಗಳ ಅಂತರದಿAದ ಮಣಿಸುವ ಮೂಲಕ ಗೋಣಿಕೊಪ್ಪಲು ಕಾವೇರಿ ಪಿಯು ಕಾಲೇಜು ತಂಡ ಚಾಂಪಿಯನ್ ಶಿಪ್ ಕಿರೀಟ ಮುಡಿಗೇರಿಸಿಕೊಂಡಿತು.
ಜಿಲ್ಲೆಯ ವಿವಿಧ 14 ಪಿಯು ಕಾಲೇಜುಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಫೈನಲ್ ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟವಾಡಿದ ಕಾವೇರಿ ಕಾಲೇಜು ತಂಡ ಉತ್ತಮ ಸಮನ್ವಯ ಹಾಗೂ ಜಾಣ್ಮೆಯಿಂದ ಗೆಲುವು ಸಾಧಿಸಿತು.
ನಾಯಕ ಮುಜಾಮಿಲ್ ನೇತೃತ್ವದ ತಂಡದಲ್ಲಿ ಭಗತ್ ಭೀಮಯ್ಯ, ಬಿಪಿನ್ ಬಿದ್ದಪ್ಪ, ರುವಾಯ್ಜ್, ಮುಸ್ತಫ, ಸಚಿನ್ ಸೋಮಣ್ಣ, ನಿರ್ಮಿತ್, ದಿಗಂತ್, ಎ. ಸಚಿನ್, ದ್ಯಾನ್ ಚಂಗಪ್ಪ, ತನ್ಮಯ್, ಡೆನ್ ಮುತ್ತಣ್ಣ, ಕೌಶಲ್, ಆಶಿಕ್ ಉತ್ತಮ ಪ್ರದರ್ಶನ ತೋರಿದರು.
ತಂಡದ ವ್ಯವಸ್ಥಾಪಕರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ. ಸಂತೋಷ್ ಮತ್ತು ಹರ್ಷಿತ್ ಅವರು ಕಾರ್ಯನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net