ಬೀದಿ ನಾಯಿ ದಾಳಿಗೆ ಮೇಕೆಗಳು ಬಲಿ

ಬೀದಿ ನಾಯಿ ದಾಳಿಗೆ ಮೇಕೆಗಳು ಬಲಿ
ಬೀದಿ ನಾಯಿ ದಾಳಿಗೆ ಮೇಕೆಗಳು ಬಲಿ
Published on

ಪ್ರಮುಖ ಮುಖ್ಯಾಂಶಗಳು

  • ಬೀದಿ ನಾಯಿ ದಾಳಿಗೆ ಮೇಕೆಗಳು ಬಲಿ
ಕುಶಾಲನಗರ: ಕುಶಾಲನಗರದ ಪುರಸಭೆ ವ್ಯಾಪ್ತಿಯ ಚೌಡೇಶ್ವರಿ ಬಡಾವಣೆಯಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಎರಡು ಮೇಕೆ ಬಲಿಯಾಗಿವೆ.
ಕೂಡುಮಗಳೂರಿನ ಅಮರನಾಥ ಬಡಾವಣೆಯ ನಿವಾಸಿ ಪುಟ್ಟರಾಜು ಅವರಿಗೆ ಸೇರಿದ ಈ ಮೇಕೆಗಳು ಬೀದಿ ನಾಯಿಗಳ ದಾಳಿಗೆ ಬಲಿಯಾಗಿವೆ. ಭಾನುವಾರ ಮೇಕೆಗಳು ಮೇಯುತ್ತಿದ್ದ ವೇಳೆ ಕೆಲ ಬೀದಿ ನಾಯಿಗಳು ಒಮ್ಮೆಲೆ ದಾಳಿ ನಡೆಸಿದ್ದು ಸ್ಥಳೀಯರು ಅವುಗಳನ್ನು ರಕ್ಷಿಸುವ ಪ್ರಯತ್ನ ಮಾಡಿದರು ಫಲಕಾರಿಯಾಗಲಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ .ಈ ವಿಷಯವನ್ನು ಪುರಸಭೆಯ ಗಮನಕ್ಕೆ ತರಲಾಗಿದ್ದು ಅಗತ್ಯ ಕ್ರಮ ವಹಿಸುವಂತೆ ಪಂಚಾಯಿತಿ ಸದಸ್ಯ ಶಂಷುದ್ದೀನ್ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net