ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್ ಅಂತರರಾಷ್ಟ್ರೀಯ ಕಾರ್ಯಗಾರ

ಕುಶಾಲನಗರ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿದರು
ಕುಶಾಲನಗರ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿದರು
Published on
ಕುಶಾಲನಗರ:
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಆಶ್ರಯದಲ್ಲಿ ಡಿಸೆಂಬರ್ 25 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್ ಅಂತರರಾಷ್ಟ್ರೀಯ ಮಟ್ಟದ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಗಾರದಲ್ಲಿ ಯುವ ಪೀಳಿಗೆಯನ್ನು ಅಂತರಾಷ್ಟ್ರೀಯ ಮಟ್ಟದ ಉದ್ಯಮಿಗಳಾಗಿ ತಯಾರಿಸುವ ಸಂಬAಧ ಗುಣಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಹಲವು ವಿಷಯಗಳನ್ನು ಒಂದೇ ವೇದಿಕೆಯಲ್ಲಿ ತಿಳಿದುಕೊಳ್ಳುವ, ಚರ್ಚಿಸುವ ಅವಕಾಶ ಈ ಸಮಾವೇಶದಲ್ಲಿದ್ದು ಅನುಭವಿಗಳ ಸಾಧಕರ ಪ್ರೇರಣಾತ್ಮಕ ಮಾರ್ಗದರ್ಶಕರಿಂದ ಆತ್ಮವಿಶ್ವಾಸ ಹೆಚ್ಚಿಸುವ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಉದ್ಯೋಗದಿಂದ ಉದ್ಯಮಿಗಳು ನವೋದ್ಯಮಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಇರುವ ಅವಕಾಶಗಳು, ಅನುಕೂಲಗಳು, ಅಡೆತಡೆಗಳಿಗೆ ಪರಿಹಾರಗಳು ಸೇರಿದಂತೆ ಯುವ ಪೀಳಿಗೆಯ ಕನಸನ್ನು ನನಸು ಮಾಡಿಕೊಳ್ಳಲು ಉನ್ನತ ತಂತ್ರಜ್ಞಾನದ ಸಹಿತ ಹಲವು ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ ಇರುವ ತಮ್ಮ ವ್ಯಾಪಾರ ವ್ಯವಹಾರ ಉದ್ಯಮಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮಾರ್ಗದರ್ಶನ ಸಲಹೆ ಸಹಕಾರ ನೀಡುವ ಕಾರ್ಯ ಈ ಕಾರ್ಯಾಗಾರ ನಡೆಯಲಿದೆ. ಆರ್ಥಿಕ ಪಾಲುದಾರಿಕೆ ಅವಶ್ಯಕತೆ ಇದ್ದಲ್ಲಿ ಉನ್ನತ ಮಟ್ಟದ ತಂತ್ರಜ್ಞಾನದ ನೆರವು, ಎ ಐ ತಂತ್ರಜ್ಞಾನದ ಸದ್ಬಳಕೆ ಸವಾಲುಗಳು ಆಮದು ರಫ್ತು ವ್ಯವಹಾರಗಳು ರಿಯಲ್ ಎಸ್ಟೇಟ್ ವ್ಯವಹಾರ ಆಧುನಿಕ ಉದ್ಯಮಗಳು ಸ್ಪರ್ಧಾತ್ಮಕ ಸವಾಲುಗಳು ಸಮಸ್ಯೆಗಳು ವ್ಯವಸಾಯದ ಚಟುವಟಿಕೆಗಳ ವೈವಿಧ್ಯತೆಗಳು ಬ್ಯಾಂಕಿAಗ್ ಕ್ಷೇತ್ರದಿಂದ ದೊರೆಯುವ ಸೌಲಭ್ಯಗಳು ಹೊಸ ಆವಿಷ್ಕಾರ ಅಳವಡಿಸಿಕೊಳ್ಳುವ ಬಗ್ಗೆ ಪರಿಣಿತರಿಂದ ಸಲಹೆ ನೀಡಲಾಗುತ್ತದೆ.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕೇವಲ ಒಂದು ಸಂಘಟನೆಯಾಗಿ ಮಾತ್ರ ಉಳಿಯದೆ, ಸಂಕಷ್ಟದಲ್ಲಿರುವವರ ಕಲ್ಪವೃಕ್ಷದಂತೆ ಕೆಲಸ ಮಾಡುತ್ತಿದೆ. ಕಳೆದ 8 ವರ್ಷಗಳಲ್ಲಿ ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 40 ಕೋಟಿ ರೂಪಾಯಿಗಳಿಗೂ ಮೀರಿದ ಬೃಹತ್ ಮೊತ್ತವನ್ನು ಅಶಕ್ತರ, ಅಬಲರ ಅವಶ್ಯಕತೆ ಇರುವವರಿಗೆ ಕಾಮಧೇನುವಾಗಿ ನೀಡುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು.
ಆ. 23ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಗ್ಲೋಬಲ್ ಆರ್ಯವೈಶ್ಯ ಸಮಾವೇಶದ ಸಂಕಲ್ಪ ಯಾತ್ರೆಯನ್ನು ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ದ್ವಿಚಕ್ರವಾಹನ, ಪಾದಯಾತ್ರೆ, ರ‍್ಯಾಲಿ ಕ ಬೈಚನಹಳ್ಳಿಯಿಂದ ಆರಂಭಗೊAಡು ಮುಖ್ಯರಸ್ತೆಯಲ್ಲಿ ಕುಶಾಲನಗರ ರಥ ಬೀದಿ ಮೂಲಕ ಆಂಜನೇಯ ದೇವಾಲಯ ತನಕ ಸಾಗಲಿದೆ. ಕುಶಾಲನಗರ ಡಿ ವೈ ಎಸ್ ಪಿ ಚಂದ್ರಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಪಿ.ಎಸ್. ಪ್ರಶಾಂತ್, ಕನ್ನಿಕಾ ಪರಮೇಶ್ವರಿ ಸಹಕಾರ ಸಂಘದ ಅಧ್ಯಕ್ಷ ಅಮೃತ್ ರಾಜ್, ವಾಸವಿ ಸಮಾಜದ ನಿರ್ದೇಶಕ ಕೆ.ಜೆ. ಸತೀಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net