ಅಣ್ಣತಂಗಿ ಬಾಂಧವ್ಯದ ಕಥೆಯಳ್ಳ ಚಿತ್ರ ಇದಾಗಿದ್ದು, ಸಸ್ಪೆನ್ಸ್ ಮರ್ಡರ್ ಮಿಸ್ಟರಿ ಅಂಶಗಳನ್ನು ಒಳಗೊಂಡಿದೆ. ರತೀಶ್ ಕೂರ್ಗ್ ಈ ಚಿತ್ರದ ನಾಯಕ, ತಂಗಿಯಾಗಿ ಭವಾನಿ ಉಳಿದಂತೆ ಭಾನು ಮೋಹನ್, ಚಾಮರಾಜು, ರೇವಣ್ಣ ಮಾಗಡಿ, ಚೆನ್ನಬಸವ, ಕಿಶೋರ್, ಸಂಜೀವ್, ಮಾಸ್ಟರ್ ಹೃದಯನ್ ಗೌಡ, ಮಾಸ್ಟರ್ ಪುನೀತ್ ಮುಂತಾದವರು ನಟಿಸಿದ್ದಾರೆ. ಹಾಡುಗಳಿಗೆ ವಿನ್ಸೆಂಟ್ ಮುಕೇಶ್ ಸಂಗೀತ ಸಂಯೋಜಿಸಿದ್ದಾರೆ ಎಂದು ತಿಳಿಸಿದರು.