ಕೊಡಗು ಜಿಲ್ಲೆಯಲ್ಲಿ ಮಾ.೯ನೇ ತಾರೀಖಿನಿಂದ ಎಚ್.ಪಿ.ವಿ ಲಸಿಕೆಯನ್ನು ನೀಡಲು ಪ್ರಾರಂಭಿಸಲಾಗಿದ್ದು, ಒಟ್ಟು ಗುರಿ ೫೨೭೬ ಇದ್ದು, ಜಿಲ್ಲೆಗೆ ೩೯೫೫ ಲಸಿಕೆಯನ್ನು ಸರಬರಾಜು ಮಾಡಿದ್ದು, ಇಲ್ಲಿಯವರೆಗೆ ೧೬೨೮ ಮಕ್ಕಳಿಗೆ ನೀಡಲಾಗಿದೆ. ಶೇ.೩೦.೮೫ ಪ್ರಗತಿ ಸಾಧಿಸಲಾಗಿದೆ. ಹೆಚ್ಚಿನ ಮಕ್ಕಳು ಲಸಿಕೆಯನ್ನು ಪಡೆಯಲು ಹಿಂದೇಟು ಹಾಕುತ್ತಿದ್ದು ಅದರ ಪ್ರಯೋಜನ ಪಡೆಯಲು ಹಿಂಜರಿಯುತ್ತಿದ್ದಾರೆ. ಈ ಲಸಿಕೆಯ ಭವಿಷ್ಯದಲ್ಲಿ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ಬಾರದ ರೀತಿ ತಡೆಯಲು ಸಾಧ್ಯವಾಗುತ್ತಿದ್ದು, ಸರ್ಕಾರ ಉಚಿತ ನೀಡುತ್ತಿರುವ ಲಸಿಕೆಯ ಪ್ರಯೋಜನ ಪಡೆಯಲು ಡಾ.ಸತೀಶ್ ಕುಮಾರ್ ಮನವಿ ಮಾಡಿದ್ದಾರೆ.