‘ಗೌಜಿ ಗಮ್ಮತ್’ ತಂಡಕ್ಕೆ ಚಾಂಪಿಯನ್‌ಪಟ್ಟ

ದುಬೈ ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ದುಬೈಯಿಂದ ಆಯೋಜಿಸಿದ್ದ ‘ಕ್ರಿಕೆಟ್ ಸೀಸನ್‌ನ ವಿಜೇತ ತಂಡ.
ದುಬೈ ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ದುಬೈಯಿಂದ ಆಯೋಜಿಸಿದ್ದ ‘ಕ್ರಿಕೆಟ್ ಸೀಸನ್‌ನ ವಿಜೇತ ತಂಡ.
Published on
ನಾಪೋಕ್ಲು: ದುಬೈ ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ದುಬೈಯಿಂದ ಆಯೋಜಿಸಿದ್ದ ‘ಕ್ರಿಕೆಟ್ ಸೀಸನ್ 6’ ಹಾಗೂ ಪ್ರಥಮ ವರ್ಷದ ‘ಥ್ರೋಬಾಲ್ ಸೀಸನ್-1’ ಕ್ರೀಡಾಕೂಟವು ದುಬೈನಲ್ಲಿ ಸಂಭ್ರಮದಿಂದ ನಡೆಯಿತು.
ಈ ಬಾರಿಯ ಕ್ರೀಡಾಕೂಟದ ಆಕರ್ಷಕ ವಿಜೇತ ಟ್ರೋಫಿಗಳನ್ನು ಸಂಘದ ಉಪಾಧ್ಯಕ್ಷ ಸುರೇಶ್ ಕುಂಪಲ ಅವರು ತಮ್ಮ ಮಾತೃಶ್ರೀ ದಿ.ಕಮಲಾ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿದ್ದರು. ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಮೋಹನ್ ಕಡಂಬಳ, ಉಪಾಧ್ಯಕ್ಷ ಸುರೇಶ್ ಕುಂಪಲ ಹಾಗೂ ಸಲಹೆಗಾರ ಹರೀಶ್ ಕೋಡಿ ಮತ್ತು ಸುನಿಲ್ ಮೊಟ್ಟೆಮನೆ ಉದ್ಘಾಟಿಸಿದರು.
ಜಿದ್ದಾಜಿದ್ದಿನಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ‘ಗೌಜಿ ಗಮ್ಮತ್’ ತಂಡವು ಚಾಂಪಿಯನ್‌ಪಟ್ಟ ಅಲಂಕರಿಸಿತು. ಕೂರ್ಗ್ ವಾರಿಯರ್ಸ್’ ತಂಡವು ರನ್ನರ್-ಅಪ್ ಪ್ರಶಸ್ತಿ ಪಡೆಯಿತು.
ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಆಯೋಜಿಸಿದ್ದ ಥ್ರೋಬಾಲ್ ಸೀಸನ್-1 ಪಂದ್ಯಾವಳಿಯಲ್ಲಿ 4 ತಂಡಗಳು ಪಾಲ್ಗೊಂಡಿದ್ದು, ‘ದುಬೈ ರಾಯಲ್ಸ್’ ಪ್ರಥಮ ಸ್ಥಾನ ಹಾಗೂ ‘ಟೀಂ ಬಾವಾಸ್’ ದ್ವಿತೀಯ ಸ್ಥಾನ ಗಳಿಸಿತು. ಉತ್ತಮ ಶಿಸ್ತಿನ ತಂಡ ಪ್ರಶಸ್ತಿಯ ಪ್ರಾಯೋಜಕ ಆನಂದ್ ವಳಾಲ್ ಗೌಡ ಫ್ರೆಂಡ್ಸ್ ಕ್ಲಬ್ಗೆ ಪ್ರಶಸ್ತಿ ನೀಡಿದರು. ಕ್ರೀಡಾಕೂಟದ ಅಂಗವಾಗಿ ಆಯೋಜಿಸಿದ್ದ ಮಹಿಳೆಯರ ಹಗ್ಗಜಗ್ಗಾಟ ಗಮನ ಸೆಳೆಯಿತು.
ಮಕ್ಕಳಿಗಾಗಿ ಆಯೋಜಿಸಿದ್ದ ವಿವಿಧ ಮನರಂಜನಾ ಆಟಗಳನ್ನು ಆಯುಶ್ ಕೋಡಿ ಮತ್ತು ಕಾವ್ಯಾ ಅವಿನಾಶ್ ಅತ್ಯಂತ ಉತ್ಸಾಹದಿಂದ ನಿರ್ವಹಿಸಿದರು. ಕ್ರಿಕೆಟ್ ಪಂದ್ಯಾವಳಿಯ ತೀರ್ಪುಗಾರರಾಗಿ ಗಿರೀಶ್, ಸುಧೀರ್ ಮತ್ತು ಮನೋಜ್ ಅವರು ಅಚ್ಚುಕಟ್ಟಾಗಿ ನಿಭಾಯಿಸಿದರು.
ಕಾರ್ಯಕ್ರಮದುದ್ದಕ್ಕೂ ಮನೋಜ್ ಕುಲಾಲ್ ಅವರು ತಮ್ಮ ಆಕರ್ಷಕ ವಾಗ್ಝರಿಯ ಮೂಲಕ ವೀಕ್ಷಕ ವಿವರಣೆ ನೀಡಿದರು. ಕ್ರೀಡಾ ಸಂಯೋಜಕರಾಗಿ ಪ್ರಶಾಂತ್ ವಿಟ್ಲ, ನಾಗೇಶ್, ಅಕ್ಷತ್ ಮಲ್ಲಿ ಹಾಗೂ ಅನೀಶ್ ಶೆಟ್ಟಿ ಅವರು ಸಹಕರಿಸಿದರು. ಪ್ರಮುಖರಾದ ಮೀನಾ ಹರೀಶ್ ಕೋಡಿ, ಸುಪ್ರೀತಾ ಸುರೇಶ್, ರಕ್ಷಿತಾ ದೇರಾಜೆ ಹಾಗೂ ಮಾನಸ ದಿಲೀಪ್ ಉಳುವಾರು, ಯತೀಶ್ ಗೌಡ ಗಣೇಶ್ ಅಚ್ಚಂಡಿರ, ಆನಂದ್ ಪಟ್ಟೆ ವಳಾಲ್, ದಿಲೀಪ್ ಉಳುವಾರು ಮತ್ತು ಸುನಿಲ್ ಕರ್ಣಾಯನ ಇದ್ದರು. ಸುಮಾರು 400ಕ್ಕೂ ಹೆಚ್ಚು ಸಮಾಜ ಬಾಂಧವರು ಈ ಕ್ರೀಡಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net