ಕಾಶಿಯಿಂದ ಆಗಮಿಸಿದ ಗಂಗಾ ಜಲ

ಕಾಶಿಯಿಂದ ಅಂಚೆಯ ಮೂಲಕ ತರುವ ಗಂಗಾಜಲವನ್ನು ಹೆಬ್ಬಾಲೆ ಗ್ರಾಮದೇವತಾ ಸಮಿತಿ ಪದಾಧಿಕಾರಿಗಳು ಹೆಬ್ಬಾಲೆಯ ಬಸವೇಶ್ವರ ದೇವಾಲಯಕ್ಕೆ ಕೊಂಡೊಯ್ದರು. ಕೆ.ಎನ್. ಸುರೇಶ್, ಮಂಜುನಾಥ ಸ್ವಾಮಿ, ಹೆಚ್.ಟಿ. ರಮೇಶ್, ನಾರಾಯಣ, ಹೆಚ್.ಟಿ. ಸೋಮಣ್ಣ, ಪುಟ್ಟರಾಜು ಮತ್ತಿತರರು ಇದ್ದರು.

Published on
ಕುಶಾಲನಗರ:
ಕಣಿವೆಯಲ್ಲಿ ಇರುವ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಬ್ರಹ್ಮರಥೋತ್ಸವವ ಹಿನ್ನೆಲೆಯಲ್ಲಿ ಕಾಶಿಯಿಂದ ಅಂಚೆಯ ಮೂಲಕ ತರುವ ಗಂಗಾಜಲವನ್ನು ಹೆಬ್ಬಾಲೆ ಗ್ರಾಮದೇವತಾ ಸಮಿತಿ ಪದಾಧಿಕಾರಿಗಳು ಅಲಂಕೃತ ಮಂಟಪದಲ್ಲಿ ಇರಿಸಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಹೆಬ್ಬಾಲೆಯ ಬಸವೇಶ್ವರ ದೇವಾಲಯಕ್ಕೆ ಕೊಂಡೊಯ್ದರು. ಗ್ರಾಮದಲ್ಲಿ ಗಂಗಾ ತೀರ್ಥವನ್ನು ಪೂಜೆ ಮಾಡಿಸಿದ ನಂತರ ರಥೋತ್ಸವದ ದಿನ ಮಧ್ಯಾಹ್ನ ಮೆರವಣಿಯಲ್ಲಿ ತಂದು ಶ್ರೀರಾಮಲಿಂಗೇಶ್ವರ ಉತ್ಸವ ಮೂರ್ತಿಯ ಮೇಲೆ ಪ್ರೋಕ್ಷಣೆಗೈದ ಬಳಿಕವಷ್ಟೇ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ತಿಳಿಸಿದರು.
ಈ ಸಂದರ್ಭ ಕಣಿವೆ ದೇವಾಲಯ ಸಮಿತಿ ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ಹೆಬ್ಬಾಲೆ ಗ್ರಾಮ ದೇವತಾ ಸಮಿತಿ ಅಧ್ಯಕ್ಷ ಹೆಚ್.ಟಿ. ರಮೇಶ್, ಉಪಾಧ್ಯಕ್ಷ ನಾರಾಯಣ, ಕಾರ್ಯದರ್ಶಿ ಹೆಚ್.ಟಿ. ಸೋಮಣ್ಣ, ಪುಟ್ಟರಾಜು, ರಮೇಶ್, ಶಿವಪ್ಪ, ದಿನೇಶ, ನವೀನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net