ತಟ್ಟಳ್ಳಿ ಹಾಡಿಯಲ್ಲಿ ಗಣೇಶ ವಿಸರ್ಜನೆ

ಮೆರವಣಿಗೆಯಲ್ಲಿ ಬುಡಕಟ್ಟು ಸಂಸ್ಕೃತಿ ಅನಾವರಣ
procession
ವಿರಾಜಪೇಟೆ ತಾಲೂಕಿನ ತಟ್ಟಳ್ಳಿ ಹಾಡಿಯಲ್ಲಿ ಶ್ರೀಮುನೇಶ್ವರ ಸೇವಾ ಸಮಿತಿ ವತಿಯಿಂದ ಗಣೇಶ ಮೂರ್ತಿ ವಿಸರ್ಜನಾಪೂರ್ವ ಮೆರವಣಿಗೆ ಸೋಮವಾರ ನೆರವೇರಿತು.ಹಾಡಿಗಳ ಯುವ ಮುಖಂಡರು ಭಾಗವಹಿಸಿದ್ದರು. ganesh
Published on: 

ಸಿದ್ದಾಪುರ : ವಿರಾಜಪೇಟೆ ತಾಲೂಕಿನ ತಟ್ಟಳ್ಳಿ, ದಿಡ್ಡಳ್ಳಿ ಹಾಡಿಯಲ್ಲಿ ಶ್ರೀ ಮುನೇಶ್ವರ ಸೇವಾ ಸಮಿತಿ ವತಿಯಿಂದ 8ನೇ ವರ್ಷದ ಗೌರಿ ಗಣೇಶೋತ್ಸವವನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದರು. ಗಣೇಶೋತ್ಸವ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ಹಾಡಿಯ ಸಾಂಪ್ರದಾಯಿಕ ತಮಟೆ, ಚಂಡೆ, ಕೊಳಲು ವಾದನ ಸೇರಿದಂತೆ ಸ್ಥಳೀಯ ಬುಡಕಟ್ಟು ವಾದ್ಯಗಳ ನಾದ ಮೊಳಗಿದ್ದು ವಿಶೇಷವಾಗಿತ್ತು.

ಸೋಮವಾರ ನಡೆದ ಗಣೇಶ ಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ವಿವಿಧ ವಾದ್ಯಗಳ ಲಯಕ್ಕೆ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಹೆಜ್ಜೆ ಹಾಕಿದರು. ವೃತ್ತಾಕಾರವಾಗಿ ನಿಂತು ಲಯಬದ್ಧವಾಗಿ ಕುಣಿದ ಹಾಡಿಯ ಜನರ ಸಾಂಪ್ರದಾಯಿಕ ನೃತ್ಯ ನೋಡುಗರ ಗಮನ ಸೆಳೆಯಿತು. ಗಣೇಶ ಮೂರ್ತಿಯ ಮೆರವಣಿಗೆ ಕಲ್ಲಳ, ಮಾಲ್ದಾರೆ, ಗುಡ್ಲೂರು ಹಾಗೂ ದಿಡ್ಡಳ್ಳಿ ಗ್ರಾಮಗಳ ಮೂಲಕ ಸಾಗಿತು. ಆಯಾ ಹಾಡಿಯ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ನಂತರ ಬಳಿಜಟ್ಟಿ ಕೆರೆಯಲ್ಲಿ ಗೌರಿ, ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಹಾಡಿಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಉತ್ಸವ ಸಾಕ್ಷಿಯಾಯಿತು. ಈ ಸಂದರ್ಭ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net