

ಸಂಬAಧಿಸಿದ ಕ್ಷೇತ್ರದಲ್ಲಿ ವಿಜ್ಞಾನಿಗಳ ಹುದ್ದೆ ಖಾಲಿ ಇದ್ದ ಕಾರಣ ಕಳೆದ ಕೆಲವು ವರ್ಷಗಳಿಂದ ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಮಾಡಹಾಗಲಕಾಯಿಗೆ ಸಂಬAಧಿಸಿದ ಸಂಶೋಧನೆಗಳು ನಡೆಯುತ್ತಿರಲಿಲ್ಲ. ಇದೀಗ ವಿಜ್ಞಾನಿಗಳು ಬಂದಿದ್ದಾರೆ ನಿಂತುಹೋಗಿದ್ದ ಸಂಶೋಧನೆ ಮತ್ತೆ ಆರಂಭವಾಗಿದೆ. ಮಾಡಹಾಗಲಕ್ಕೆ ಸಂಬAಧಿಸಿದAತೆ ಹೊಸದಾಗಿ ತೋಟವನ್ನೂ ಮಾಡಲಾಗುತ್ತಿದೆ. ಮುಂದಿನ ವರ್ಷದಿಂದ ಆಸಕ್ತ ರೈತರಿಗೆ ನಮ್ಮ ಕೇಂದ್ರದಲ್ಲಿ ಮಾಡಹಾಗಲಕಾಯಿ ಗಿಡಗಳು ಲಭ್ಯವಾಗಲಿವೆ.
— ಡಾ. ಬಿ.ಎಂ. ಮುರಳೀಧರ್, ಮುಖ್ಯಸ್ಥರು, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿ