ಪೀಠೋಪಕರಣ ಘಟಕ ಮಾಲೀಕರು ಮತ್ತು ಕಾರ್ಮಿಕರ ಸಂಘ ಅಸ್ಥಿತ್ವಕ್ಕೆ

ಪೀಠೋಪಕರಣ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಎನ್.ಸಿ.ವಿಜಯ ಕುಮಾರ್, ಉಪಾಧ್ಯಕ್ಷರಾಗಿ ಎಂ.ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಸಿ.ಉತ್ತಯ್ಯ, ಸಹ ಕಾರ್ಯದರ್ಶಿಯಾಗಿ ಮಹಾದೇವ, ಖಜಾಂಚಿಯಾಗಿ ಸಿದ್ದರಾಜು ಆಯ್ಕೆಯಾಗಿದ್ದಾರೆ.
ಪೀಠೋಪಕರಣ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಎನ್.ಸಿ.ವಿಜಯ ಕುಮಾರ್, ಉಪಾಧ್ಯಕ್ಷರಾಗಿ ಎಂ.ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಸಿ.ಉತ್ತಯ್ಯ, ಸಹ ಕಾರ್ಯದರ್ಶಿಯಾಗಿ ಮಹಾದೇವ, ಖಜಾಂಚಿಯಾಗಿ ಸಿದ್ದರಾಜು ಆಯ್ಕೆಯಾಗಿದ್ದಾರೆ.
Published on
ವಿರಾಜಪೇಟೆ: ಮರ ಮತ್ತು ಕಬ್ಬಿಣ ಸಾಮಾಗ್ರಿಗಳಿಂದ ತಯಾರಿಸುವ ಪೀಠೋಪಕರಣ ಮಾಲೀಕರು ಮತ್ತು ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ನೂತನವಾಗಿ ಸಂಘ ಇತ್ತೀಚೆಗೆ ಅಸ್ಥಿತ್ವಕ್ಕೆ ಬಂದಿದೆ.
ಪಿಠೋಪಕರಣ ತಯಾರಿಕಾ ಕ್ಷೇತ್ರದಲ್ಲಿ ಮಾಲೀಕರು ಮತ್ತು ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಮಾಹಿತಿ ಕೊರತೆಯಿದೆ. ಕಾರ್ಮಿಕರು ಮತ್ತು ಮಾಲೀಕರ ಹಿತವನ್ನು ಕಾಪಾಡಲು ಸಂಘಟಿತ ಹೋರಾಟ ಮತ್ತು ನೋಂದಾಯಿತ ಸಂಘಟನೆಯಿಂದ ಮಾತ್ರ ಸಾಧ್ಯ ಎಂದು ವಿರಾಜಪೇಟೆ ನಗರದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಸಂಘ ನೋಂದಾಯಿಸುವುದು, ಕಾನೂನು ಸಲಹೆಗಾರರ ನೇಮಕ ಮಾಡಲು ತೀರ್ಮಾನಿಸಲಾಯಿತು. ಸಂಘ ಅಧ್ಯಕ್ಷರಾಗಿ ಎನ್.ಸಿ.ವಿಜಯ ಕುಮಾರ್, ಉಪಾಧ್ಯಕ್ಷರಾಗಿ ಎಂ.ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಸಿ.ಉತ್ತಯ್ಯ, ಸಹ ಕಾರ್ಯದರ್ಶಿಯಾಗಿ ಮಹಾದೇವ, ಖಜಾಂಚಿಯಾಗಿ ಸಿದ್ದರಾಜು, ಸದಸ್ಯರಾಗಿ ಪ್ರಭಾಕರ್ ಟಿ.ಸಿ, ಧಾಮೋದರ್, ಹರಿದಾಸ್, ಶಿಜ, ಕೆ.ಜೆ.ರವೀಂದ್ರ, ನಿತೀನ್, ಪ್ರವೀಣ್, ಶಶೀಧರ್ ಎಂ.ಎನ್., ಗಂಗಾಧರ, ಎಂ.ಎ.ಮೋಹನ್ ಆಯ್ಕೆಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net