ಸುಂಟಿಕೊಪ್ಪ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 94 ಮಕ್ಕಳಿಗೆ ಸಮಾಜ ಸೇವಕ ಇಬ್ರಾಹಿಂ (ಬಾಪ್ಪು) ಅವರು ಸೋಮವಾರ ಉಚಿತವಾಗಿ ಟ್ರ್ಯಾಕ್‌ಸೂಟ್ ವಿತರಿಸಿದರು.
ಪ್ರೌಢಶಾಲೆಯಲ್ಲಿ ಬಹುಪಾಲು ಮಂದಿ ಕೂಲಿ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಖಾಸಗಿ ಶಾಲೆಗಳಲ್ಲಿ ವಾರದ 2 ದಿನಗಳಲ್ಲಿ ಧರಿಸುವ ಟ್ರ್ಯಾಕ್‌ಸೂಟ್‌ನಿಂದ ವಂಚಿತರಾಗಿದ್ದರು. ಈ ವಿಷಯ ಅರಿತ ಇಬ್ರಾಹಿಂ ಬಾಪ್ಪು ಅವರು ಶಾಲೆಗೆ ತೆರಳಿ ಮಕ್ಕಳಿಗೆ ಟ್ರ್ಯಾಕ್‌ಶೂಟ್ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ.
ಶಾಲಾ ಉಪಪ್ರಾಂಶುಪಾಲ ಬಾಲಕೃಷ್ಣ ಅವರು ಮಾತನಾಡಿ, ಇಬ್ರಾಹಿಂ ಬಾಪ್ಪು ಅವರು ತಮ್ಮ ಆದಾಯದ ಅಲ್ಪ ಭಾವನ್ನು ಸಮಾಜಕ್ಕೆ ನೀಡಬೇಕೆಂಬ ಇರಾದೆಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ರಾೃಕ್‌ಸೂಟ್ ವಿತರಿಸಿದ್ದಾರೆ. ಜತೆಗೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅವರಿಗೆ ಧನಸಹಾಯವನ್ನು ಮಾಡುವ ಮೂಲಕ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸುವ ಕಾರ್ಯಕದಲ್ಲಿ ತೊಡಗಿಸಿಕೊಂಡಿರುವುದು ಸಮಾಜ ಸೇವೆಗೆ ಹಿಡಿದಿರುವ ಕನ್ನಡಿಯಾಗಿದೆ ಎಂದು ಪ್ರಶಂಶಿಸಿದರು.
ಹಿರಿಯ ಪತ್ರಕರ್ತ ಬಿ.ಡಿ.ರಾಜು ರೈ, ಸುಂಟಿಕೊಪ್ಪ ಟಿನೇಜ್ ಸೆಂಟರ್ ಮಾಲೀಕ ಹಸೈನಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿರಿಲ್ ರಾಡ್ರಿಗಸ್, ಶಾಲಾ ಸಹ ಶಿಕ್ಷಕರಾದ ಪ್ರಕಾಶ್, ಚಿತ್ರಾ, ಲಿಯೋನಾ, ಸುನಂದಾ, ಜಯಶ್ರೀ, ಶಾಂತ ಹೆಗ್ಡೆ ಇತರರಿದ್ದರು.