ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಮಾತನಾಡಿ ಆರೋಗ್ಯವಂತ ದೇಶ ಹಾಗೂ ಸ್ವಾಸ್ಥ ಸಮಾಜಕ್ಕಾಗಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಆಸ್ಪತ್ರೆಗೆ ತೆರಳಲು ಸಾಧ್ಯವಾಗುವುದಿಲ್ಲ ಹಾಗೂ ಮನೆಯಲ್ಲಿರುವ ಕೆಲವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾರೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಇವರಿಗೆಲ್ಲರಿಗೂ ಸಹಾಯ ಮಾಡುವ ನಿಟ್ಟಿನಲ್ಲಿ ಈ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರ ಜು. 25ರಂದು ಬೆಳಗ್ಗೆ 9.30 ರಿಂದ ಆರಂಭವಾಗಲಿದೆ. ಶಿಬಿರದಲ್ಲಿ ತಜ್ಞ ವೈದ್ಯರು ವೈದ್ಯಕೀಯ ತಪಾಸಣೆ ಮಾಡಿ, ಚಿಕಿತ್ಸೆ ಮತ್ತು ಸಲಹೆ ನೀಡಲಿದ್ದಾರೆ. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಬಿಪಿ ಸ್ಕ್ರೀನಿಂಗ್, ರಾಂಡಮ್ ಬ್ಲಡ್ ಶುಗರ್ ಆರ್ ಬಿ ಎಸ್ ಸಿ ಸ್ಕ್ರೀನಿಂಗ್, ಕಣ್ಣಿನ ತಪಾಸಣೆ, ಆಹಾರ ಕ್ರಮ ಮತ್ತು ಪೌಷ್ಠಿಕ ಆಹಾರ ಮಾಹಿತಿ, ಜೀವನ ಶೈಲಿ ಬಗ್ಗೆ ಜಾಗೃತಿ, ಸಿಪಿಆರ್ ಜಾಗೃತಿ, ವಿಶೇಷ ಸ್ಕ್ರೀನಿಂಗ್ ಹಾಗೂ ಮಾರ್ಗದರ್ಶನ ದೊರೆಯಲಿದೆ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತೆ ಕೇಳಿಕೊಂಡರು.