ಉತ್ತಮ ಆರೋಗ್ಯ ಭಾಗ್ಯವೇ ನಮ್ಮ ಸಂಪತ್ತು

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಜಾಗೃತಿ ಶಿಬಿರವನ್ನು ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಉದ್ಘಾಟಿಸಿದರು. ಎಂ.ಮೋಟಯ್ಯ, ಅಮೃತ್ ನಾಣಯ್ಯ ಇತರರಿದ್ದರು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಜಾಗೃತಿ ಶಿಬಿರವನ್ನು ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಉದ್ಘಾಟಿಸಿದರು. ಎಂ.ಮೋಟಯ್ಯ, ಅಮೃತ್ ನಾಣಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉತ್ತಮ ಆರೋಗ್ಯ ಭಾಗ್ಯವೇ ನಮ್ಮ ಸಂಪತ್ತು
  • ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ
ಗೋಣಿಕೊಪ್ಪ: ಪೊನ್ನಂಪೇಟೆ ಕೊಡವ ಸಮಾಜ, ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆ ಮತ್ತು ಕೊಡಗು ಹೆಲ್ತ್ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಜಾಗೃತಿ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು ೩೦೦ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಕೊಂಡರು.
ಪ್ರಸ್ತಾವಿಕವಾಗಿ ಮಾತನಾಡಿದ ಪೊಮ್ಮಕ್ಕಡ ಕೂಟಡ ಅಧ್ಯಕ್ಷೆ ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಉತ್ತಮ ಆರೋಗ್ಯ ಭಾಗ್ಯಕ್ಕಿಂತ ಬೇರೆ ಯಾವುದೇ ಸಂಪತ್ತು ಇಲ್ಲ. ಇಂದಿನ ಕಾಲದಲ್ಲಿ ಜನರಿಗೆ ವಿವಿಧ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಎಷ್ಟೋ ಜನರಿಗೆ ಸರಿಯಾದ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ದೊರೆಯಿದೇ ಇರಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸುವ ಇಂಗಿತ ವ್ಯಕ್ತಪಡಿಸಿದಾಗ ಲೋಪ ಮುದ್ರಾ ಆಸ್ಪತ್ರೆಯಿಂದ ಉತ್ತಮ ಸ್ಪಂದನೆ ದೊರೆಯಿತು. ಇದರ ಪ್ರಯೋಜನವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡಾಗ ನಮ್ಮೆಲ್ಲರ ಪ್ರಯತ್ನ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಸಮಾಜದ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ ಮಾತನಾಡಿ, ನಮ್ಮ ಸಮಾಜದಿಂದ ಪ್ರಪ್ರಥಮವಾಗಿ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಕಳೆದ ವರ್ಷ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಸಮಾಜ ಕೇವಲ ಕಲ್ಯಾಣ ಮಂಟಪಕ್ಕೆ ಸೀಮಿತವಾಗಬಾರದು ಎಂಬ ನಿಟ್ಟಿನಲ್ಲಿ ಸಾಧ್ಯವಾದಷ್ಟು ಜನರಿಗೆ ಪ್ರಯೋಜನವಾಗುವ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬರಲಾಗುತ್ತಿದೆ ಎಂದರು.
ಕೊಡಗು ಹೆಲ್ತ್ ಫೌಂಡೇಶನ್ ಕಾರ್ಯದರ್ಶಿ ಮತ್ತು ಲೋಪಮುದ್ರ ಆಸ್ಪತ್ರೆಯ ಮುಖ್ಯ ತಜ್ಞ ವೈದ್ಯರಾದ ಡಾ.ಮುಕ್ಕಾಟಿರ ಅಮೃತ್ ನಾಣಯ್ಯ ಮಾತನಾಡಿ ಒಂದನೇದಾಗಿ ಏತಕ್ಕಾಗಿ ಈ ಆರೋಗ್ಯ ಶಿಬಿರ ಎಂಬ ವಿಚಾರ ಬಂದಾಗ ಆರೋಗ್ಯವಂತ ಜನರಿಗೆ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಚೆನ್ನಾಗಿದ್ದೇವೆ ಏಕೆ ಅರೋಗ್ಯ ತಪಾಸಣೆ ಎಂದು ನಿಲುವು ಹೊಂದಿರುತ್ತಾರೆ. ಅರೋಗ್ಯ ತಪಾಸಣೆಗೆ ಅವರಿಗೆ ಸಮಯವನ್ನು ಕೊಡುವುದಿಲ್ಲ. ಆರೋಗ್ಯ ನಿರ್ಲಕ್ಷ್ಯ ದಿಂದ ಆರೋಗ್ಯ ಸಮಸ್ಯೆ ಉಲ್ಬಣವಾದಾಗ ಆಸ್ಪತ್ರೆಗೆ ಬರುತ್ತಾರೆ. ಆ ಸಂದರ್ಭದಲ್ಲಿ ಬಿಪಿ, ಶುಗರ್ ಇತ್ಯಾದಿ ಆರೋಗ್ಯ ಸಮಸ್ಯೆ ಇರುವುದು ಪತ್ತೆಯಾಗುತ್ತದೆ. ಆದ್ದರಿಂದ ನಿರಂತರವಾಗಿ ಆರೋಗ್ಯ ಜಾಗೃತಿಗಾಗಿ ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಎಲ್ಲವೂ ಸರಿಯಾಗಿದ್ದರೆ ಆರೋಗ್ಯವನ್ನು ಖಚಿತ ಪಡಿಸಿಕೊಳ್ಳಬಹುದು ಎಂದು ಹೇಳಿದರು. ಶಿಬಿರದ ಮೂಲಕ ಆರಂಭ ಹಂತದಲ್ಲಿಯೇ ರೋಗ ಪತ್ತೆ ಮಾಡಿದರೆ, ಗುಣಪಡಿಸುವ ಆಯ್ಕೆ ಸಂಪೂರ್ಣವಾಗಿರುತ್ತದೆ ಎಂದರು.
ಆಸ್ಪತ್ರೆಯ ಕಣ್ಣಿನ ತಜ್ಞ ವೈದ್ಯ ಡಾ.ಡಾ.ಸೌಮ್ಯ ಗಣೇಶ್ ನಾಣಯ್ಯ ಮಾತನಾಡಿ, ಆರೋಗ್ಯ ಇರುವಾಗ ನಮಗೆ ತೋಟ ಗದ್ದೆ, ಮದುವೆ, ಸಂಪಾದನೆ ಹೀಗೆ ನೂರಾರು ಚಿಂತೆ ಇರುತ್ತದೆ. ಆದರೆ ಆರೋಗ್ಯ ಹದಗೆಟ್ಟಾಗ ಒಂದೇ ಚಿಂತೆ ಅದು ಆರೋಗ್ಯವನ್ನು ಹೇಗೆ ಸರಿಪಡಿಸಿಕೊಳ್ಳುವುದು ಎಂದು ಇರುತ್ತದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿರುತ್ತದೆ, ಆರೋಗ್ಯದ ಕೆಟ್ಟಾಗ ಆಸ್ಪತ್ರೆಗೆ ಬಂದಾಗ ವೈದ್ಯರು ಅವರಿಗೆ ಚಿಕಿತ್ಸೆಗೆ ಬೆಂಬಲಿಸುತ್ತಾರೆ, ಆರೋಗ್ಯ ಸರಿಪಡಿಸಿಕೊಳ್ಳಲು ಚಿಕಿತ್ಸೆ ಹಾಗೂ ಸಲಹೆ ನೀಡಬಹುದು ಆದರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಾವಾಗಲೂ ಆಹಾರ ಪದ್ಧತಿ ವ್ಯಾಯಾಮ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಯತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಲೋಪಮುದ್ರ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಕಡೆಮಾಡ ತರುಣ್ ಜೋಯಪ್ಪ ಮಾತನಾಡಿ, ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿ ಕಾಪಾಡಿಕೊಳ್ಳಲು ಇದೊಂದು ಉತ್ತಮ ಶಿಬಿರವಾಗಿದೆ. ಆರೋಗ್ಯ ಸಮಸ್ಯೆಯ ಬಗ್ಗೆ ನಿರ್ಲಕ್ಷ ಮಾಡದೆ ಆರಂಭ ಹಂತದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಂಡರೆ ಸಂಪೂರ್ಣ ಗುಣವಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.
ಚಕ್ಕೆರ ವಾಣಿ ಸಂಜು, ಪ್ರೊ.ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಕೊಡವ ಸಮಾಜ ನಿರ್ದೇಶಕ ಕೊಣಿಯಂಡ ಸಂಜು ಸೋಮಯ್ಯ, ಪೊಮ್ಮಕ್ಕಡ ಕೂಟದ ಗೌ. ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಗೌ.ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ , ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ, ನಿರ್ದೇಶಕರುಗಳಾದ ಕೊಣಿಯಂಡ ಸಂಜು ಸೋಮಯ್ಯ, ಕಳ್ಳಿಚಂಡ ಚಿಪ್ಪ ದೇವಯ್ಯ, ಮೂಕಳೇರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಜಿ.ಗಂಗಮ್ಮ, ಪಾರುವಂಗಡ ದಿಲನ್ ಚಂಗಪ್ಪ ಮತ್ತು ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಜಂಟಿ ಕಾರ್ಯದರ್ಶಿ ಮೂಕಳೇರ ಆಶಾ ಪೂಣಚ್ಚ, ಖಜಾಂಚಿ ಮೂಕಳೇರ ಪಟ್ಟು ಲೀಲಾವತಿ, ನಿರ್ದೇಶಕಿಯರಾದ ಬಲ್ಯಮೀದೇರಿರ ಆಶಾ ಶಂಕರ್, ಕೊಟ್ಟಂಗಡ ವಿಜು ದೇವಯ್ಯ, ಚೆಕ್ಕೆರ ವಾಣಿ ಸಂಜು, ಮಾಣಿಯಪಂಡ ಪಾರ್ವತಿ ಜೋಯಪ್ಪ ಹಾಜರಿದ್ದರು. ಶಿಬಿರದಲ್ಲಿ ಸುಮಾರು ೩೦ ಅಧಿಕ ವೈದ್ಯಕೀಯ, ವೈದ್ಯಕೀಯೇತರ ಶಿಬ್ಬಂದಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net