ಉಚಿತ ಆರೋಗ್ಯ ಶಿಬಿರ

ಬಸವನಹಳ್ಳಿ ಲ್ಯಾಪ್ಸ್ ಸಭಾಂಗಣದಲ್ಲಿ ನಡೆದ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ. ಯು. ರಾಬಿನ್ ದೇವಯ್ಯ ಮಾತನಾಡಿದರು. ಎಸ್.ಆರ್. ಅರುಣ್ ರಾವ್, ವಿ.ಸಿ. ಅಮೃತ್, ಎಸ್.ಆರ್. ಸುನಿಲ್ ರಾವ್, ಪಿ.ಬಿ. ಮೋಹನ್ ಮತ್ತಿತರರು ಇದ್ದರು.
ಬಸವನಹಳ್ಳಿ ಲ್ಯಾಪ್ಸ್ ಸಭಾಂಗಣದಲ್ಲಿ ನಡೆದ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ. ಯು. ರಾಬಿನ್ ದೇವಯ್ಯ ಮಾತನಾಡಿದರು. ಎಸ್.ಆರ್. ಅರುಣ್ ರಾವ್, ವಿ.ಸಿ. ಅಮೃತ್, ಎಸ್.ಆರ್. ಸುನಿಲ್ ರಾವ್, ಪಿ.ಬಿ. ಮೋಹನ್ ಮತ್ತಿತರರು ಇದ್ದರು.
Published on
ಕುಶಾಲನಗರ:
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಬಸವನಹಳ್ಳಿ ಲ್ಯಾಂಪ್ ಸೊಸೈಟಿ, ಯಶಶ್ವಿನಿ ಟ್ರಸ್ಟ್, ಸ್ಮಿತಾ ಐ ಕೇರ್, ಆಶೋದಯ ಸಮಿತಿ ಸಂಯುಕ್ತ ಆಶ್ರಯದಲ್ಲಿ ಬಸವನಹಳ್ಳಿ ಲ್ಯಾಪ್ಸ್ ಸಭಾಂಗಣದಲ್ಲಿ ಗುರುವಾರ ಉಚಿತ ಅರೋಗ್ಯ ಶಿಬಿರ ನಡೆಯಿತು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ. ಯು. ರಾಬಿನ್ ದೇವಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶ್ರಮಿಕ ವರ್ಗದವರಿರುವ ಈ ಪ್ರದೇಶದಲ್ಲಿ ಇಂತಹ ಅರೋಗ್ಯ ತಪಾಸಣಾ ಶಿಬಿರ ಹಲವಷ್ಟು ಜನರಿಗೆ ಪ್ರಯೋಜನವಾಗುತ್ತದೆ. ಈ ಶಿಬಿರಕ್ಕೆ ಡಾ. ಪ್ರಶಾಂತ್, ಯಶಶ್ವಿನಿ ಸಂಯೋಜನಾಧಿಕಾರಿ ಚೇತನ್ ಹಾಗೂ ಅಶೋದಯ ಸಮಿತಿಯವರು ಸಹಕಾರ ನೀಡಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಇಂತಹ ಆರೋಗ್ಯ ಶಿಬಿರಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿ. ಶಿಬಿರದಲ್ಲಿ ಪಾಲ್ಗೊಂಡ ಅಗತ್ಯವುಳ್ಳವರಿಗೆ ಯೂನಿಯನ್ ವತಿಯಿಂದ ಉಚಿತವಾಗಿ ಕನ್ನಡಕ ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಪ್ರಾರಂಭಗೊAಡು 5 ವರ್ಷ ಪೂರ್ಣಗೊಳ್ಳುತಿರುವ ಹಿನ್ನೆಲೆಯಲ್ಲಿ ಒಂದು ವಾರದ ಕಾಲ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅದರ ಒಂದು ಭಾಗವಾಗಿ ಅರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷರೂ ಆದ ರಾಜ್ಯ ಸಹಕಾರ ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಎಸ್.ಆರ್. ಅರುಣ್ ರಾವ್ ಮಾತನಾಡಿ, ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಇಂತಹ ಉತ್ತಮ ಕಾರ್ಯಕ್ರಮಕ್ಕೆ ಯೋಜನೆ ರೂಪಿಸಿದ್ದು ಸ್ಥಳೀಯ ಜನರಿಗೆ ಬಹಳ ಉಪಕಾರಿಯಾಗಿದೆ. ಸಂಘದ ಸದಸ್ಯರಾಗಿರುವವರು ಪ್ರತಿದಿನ ತಮ್ಮದೇ ಕೆಲಸಗಳಲ್ಲಿ ತೊಡಗಿರುವವರರಾಗಿದ್ದು ಅರೋಗ್ಯದ ಬಗ್ಗೆ ಕಾಳಜಿ ಇರುವುದಿಲ್ಲ. ಆದ್ದರಿಂದ ಇಂತಹ ಕಾರ್ಯಕ್ರಮ ಬಹಳ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.
ಯೂನಿಯನ್ ನಿರ್ದೇಶಕ ವಿ.ಸಿ. ಅಮೃತ್, ಎಸ್.ಆರ್. ಸುನಿಲ್ ರಾವ್, ಸೋಮವಾರಪೇಟೆ ತಾಲೂಕು ಸಿ.ಡಿ.ಒ. ಪಿ.ಬಿ. ಮೋಹನ್, ಸ್ಮಿತಾ ಐ ಕೇರ್‌ನ ಡಾ. ಪ್ರಶಾಂತ್, ಯಶಶ್ವಿನಿ ಸಂಯೋಜನಾಧಿಕಾರಿ ಚೇತನ್, ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕರು, ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net