ಸೆಮಿಫೈನಲ್ ಪ್ರವೇಶಿಸಿದ ನಾಲ್ಕು ತಂಡ

ಸೋಮವಾರಪೇಟೆ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ  ನಡೆದ ಹಾಕಿ ಪಂದ್ಯಾಟದ ರೋಚಕ ಕ್ಷಣ.
ಸೋಮವಾರಪೇಟೆ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ನಡೆದ ಹಾಕಿ ಪಂದ್ಯಾಟದ ರೋಚಕ ಕ್ಷಣ.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟ
ಸೋಮವಾರಪೇಟೆ: ಡಾಲ್ಫಿನ್ ಸ್ಪೋರ್ಟ್ಸ್ ಕ್ಲಬ್, ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕ ಸಹಯೋಗದೊಂದಿಗೆ ದಿ. ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ನಡೆಯುತ್ತಿವ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟದಲ್ಲಿ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಮಡಿಕೇರಿಯ ಚಾರ್ಮರ್ಸ್‌ ಹಾಕಿ ತಂಡ ಮತ್ತು ಕೂಡಿಗೆಯ ಸ್ಪೋರ್ಟ್ಸ್ ಹಾಸ್ಟೆಲ್ ತಂಡಗಳ ನಡುವೆ ಪೈಪೋಟಿ ನಡೆದು ಚಾರ್ಮರ್ಸ್‌ ತಂಡ ಒಂದು ಗೋಲ್ ಗಳಿಸುವ ಮೂಲಕ ವಿಜೇತರಾಗಿ, ಸೆಮಿಫೈನಲ್‌ಗೆ ಮೊದಲ ತಂಡವಾಗಿ ಪ್ರವೇಶಿಸಿತು.
ದ್ವಿತೀಯ ಪಂದ್ಯಾಟ ಕೋಣನಕಟ್ಟೆ ಮತ್ತು ಕಕ್ಕಬ್ಬೆಯ ಮಲ್ಮ ತಂಡಗಳ ನಡುವೆ ನಡೆದು ಎರಡೂ ತಂಡಗಳು ತಲಾ ನಾಲ್ಕು ಗೋಲುಗಳನ್ನು ಗಳಿಸುವ ಮೂಲಕ ಡ್ರಾ ಸಾಧಿಸಿದವು. ನಂತರ ಎರಡೂ ತಂಡಗಳಿಗೆ ಪೆನಾಲ್ಟಿ ಶೂಟೌಟ್‌ನಲ್ಲಿ ಕಕ್ಕಬ್ಬೆಯ ಮಲ್ಮ ತಂಡ 3-1 ಗೋಲ್ ಗಳಿಂದ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿತು.
ಬೊಟ್ಟಿಯತ್‌ನಾಡ್ ಕುಂದ ಮತ್ತು ಬೆರಲ್‌ನಾಡು ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಬೆರಲ್‌ನಾಡ್ ತಂಡ 7-2 ಗೋಲ್ ಗಳಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಕೊನೆಯ ಪಂದ್ಯಾಟದಲ್ಲಿ ಡಾಲ್ಫಿನ್ಸ್ ಸೋರ್ಟ್ಸ್ ಕ್ಲಬ್, ಅಂಜಿಗೆರಿನಾಡ್ ತಂಡವನ್ನು 4-2 ಗೋಲ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು.
ಕ್ರೀಡಾಕೂಟದಲ್ಲಿ ಬೊಚ್ಚಂಡ ನಾಣಯ್ಯ, ದೀಕ್ಷಿತ್, ಐಯಪ್ಪ, ವಿನೋದ್, ಪೊನ್ನಣ್ಣ ಹಾಗೂ ಸುಪ್ರಿತ್ ಕಾರ್ಯನಿರ್ವಹಿಸಿದರು. ಶನಿವಾರ ಮಧ್ಯಾಹ್ನ ಸೆಮೀಫೈನಲ್ ಪಂದ್ಯಾಟ ನಡೆಯಲಿದ್ದು, ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net