ದಕ್ಷಿಣ ವಲಯ ಕ್ರೀಡಾಕೂಟದಲ್ಲಿ ಆಡಳಿರುವ ಕರ್ನಾಟಕ ರಾಜ್ಯ ಅಂಡರ್-17 ಫುಟ್‌ಬಾಲ್ ತಂಡದಲ್ಲಿ ಮಡಿಕೇರಿಯ ನಾಲ್ವರು ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ. ಹರ್ಷಿತ್ ಬಿ. ನಾಯಕ್, ಸಾಯಿ ತಿಮ್ಮಯ್ಯ, ಜೀವಿತ್ ಚಂಗಪ್ಪ ಹಾಗೂ ಕೆ.ಎಲ್. ಶೋಬಿತ್ ಇದ್ದಾರೆ.
Published on:
Copied
Follow Us
ಮಡಿಕೇರಿ:
ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳು ದಕ್ಷಿಣ ವಲಯ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಅಂಡರ್-17 ಫುಟ್‌ಬಾಲ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಹರ್ಷಿತ್ ಬಿ. ನಾಯಕ್, ಸಾಯಿ ತಿಮ್ಮಯ್ಯ, ಜೀವಿತ್ ಚಂಗಪ್ಪ ಹಾಗೂ ಕೆ.ಎಲ್. ಶೋಬಿತ್ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತಂಡದಲ್ಲಿ ಫಾರ್ವರ್ಡ್ ಆಟಗಾರರಾಗಿ ಹರ್ಷಿತ್ ಬಿ. ನಾಯಕ್, ಸಾಯಿ ತಿಮ್ಮಯ್ಯ, ಹಾಗೂ ಜೀವಿತ್ ಚಂಗಪ್ಪ, ಗೋಲ್ ಕೀಪರ್ ಆಗಿ ಕೆ.ಎಲ್. ಶೋಬಿತ್ ಕರ್ನಾಟಕ ತಂಡಕ್ಕೆ ಆಡಲಿದ್ದಾರೆ. ಇವರು ಶಾಲೆಯ ಕ್ರೀಡಾ ತರಬೇತುದಾರರಾದ ಹಂಚೆಟ್ಟಿರ ಈರಪ್ಪ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.
ಕರ್ನಾಟಕ ತಂಡ ಆಗಸ್ಟ್ 21ರಂದು ಬೆಂಗಳೂರಿನ ಬಿಷಪ್ ಕಾಟನ್ ಪಬ್ಲಿಕ್ ಸ್ಕೂಲ್‌ನಲ್ಲಿ ಗೋವಾ ರಾಜ್ಯದ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.
ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ಕೊಡಗು ಜಿಲ್ಲೆಯ ಕ್ರೀಡಾಭಿಮಾನಿಗಳು ಮಡಿಕೇರಿಯಿಂದ ರಾಜ್ಯ ತಂಡ ಪ್ರತಿನಿಧಿಸುತ್ತಿರುವ ನಾಲ್ವರು ವಿದ್ಯಾರ್ಥಿಗಳಿಂದ ಉತ್ತಮ ಪ್ರದರ್ಶನದ ನಿರೀಕ್ಷೆ ಇಟ್ಟುಕೊಂಡಿದ್ದರು.