ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಗೆ ನಾಲ್ವರ ಸೇರ್ಪಡೆ

ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ)ಯ ಆಡಳಿತ ಮಂಡಳಿಗೆ ನೂತನವಾಗಿ ನಾಲ್ವರು ನಿರ್ದೇಶಕರನ್ನು ನೇಮಿಸಲಾಗಿದೆ.
ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ)ಯ ಆಡಳಿತ ಮಂಡಳಿಗೆ ನೂತನವಾಗಿ ನಾಲ್ವರು ನಿರ್ದೇಶಕರನ್ನು ನೇಮಿಸಲಾಗಿದೆ.
Published on
ಮಡಿಕೇರಿ:
ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ)ಯ ಆಡಳಿತ ಮಂಡಳಿಗೆ ನೂತನವಾಗಿ ನಾಲ್ವರು ನಿರ್ದೇಶಕರನ್ನು ನೇಮಿಸಲಾಗಿದೆ. ಕಂಡAಗಾಲದ ಮಂದಮಾಡ ರಫೀಕ್(ಮುನ್ನ), ಬೇಗೂರಿನ ಆಲೀರ ಬಿ. ಮೂಸ, ಎಡಪಾಲದ ಕುಪ್ಪೋಡಂಡ ಮಹಮ್ಮದ್ ಹಾಗೂ ಚೆರಿಯಪರಂಬುವಿನ ಪರವಂಡ ಸಿರಾಜ್ ನೂತನವಾಗಿ ನೇಮಕಗೊಂಡ ನಿರ್ದೇಶಕರಾಗಿದ್ದಾರೆ. ಕೆ.ಎಂ.ಎಸ್.ಎ. ಅಧ್ಯಕ್ಷ ಆಲೀರ ರಶೀದ್ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯಲ್ಲಿ ಬುಧವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನೇಮಕ ಪ್ರಕ್ರಿಯೆ ನಡೆಯಿತು.
ಈ ಕುರಿತು ಹೇಳಿಕೆ ನೀಡಿರುವ ಕೆ.ಎಂ.ಎಸ್.ಎ. ಅಧ್ಯಕ್ಷ ಆಲೀರ ರಶೀದ್, ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯನ್ನು ವಿವಿಧ ಕ್ರೀಡಾ ಆಯೋಜನಾ ಮತ್ತು ಪ್ರತಿಭೆಗಳಿಗೆ ಉತ್ತೇಜನಕಾರಿ ಸಂಘಟನೆಯಾಗಿ ರೂಪಿಸಲಾಗುವುದು. ಇದರ ಭಾಗವಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿರುವ ಕೊಡವ ಮುಸ್ಲಿಂ ಸಮುದಾಯದ ಕ್ರೀಡಾಸಕ್ತರನ್ನು ಸಂಘಟಿಸಿ ಅಕಾಡೆಮಿಯನ್ನು ಹಂತಹAತವಾಗಿ ವಿಸ್ತರಿಸಲಾಗುವುದು. ಇದರ ಮೊದಲ ಭಾಗವಾಗಿ ನಿರ್ದೇಶಕರನ್ನು ಆಡಳಿತ ಮಂಡಳಿಗೆ ನೇಮಕಗೊಳಿಸಲಾಗಿದೆ. ಮುಂದೆಯೂ ಮತ್ತಷ್ಟು ಕ್ರೀಡಾಸಕ್ತರನ್ನು ಸೇರಿಸಿ ಕೆ.ಎಂ.ಎಸ್.ಎ. ಯನ್ನು ಇನ್ನಷ್ಟು ವಿಸ್ತರಿಸಿ ಸಂಘಟಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net