ವಿರಾಜಪೇಟೆಯಲ್ಲಿ ಧರ್ಮಸ್ಥಳ ಗ್ರಾಮಾವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಪೂರ್ವಭಾವಿ ಸಭೆಯಲ್ಲಿ ಬಾನಂಗಡ ಅರುಣ, ಹರೀಶ್, ಜೇಮ್ಸ್, ರಜಿತ, ಸುಮನ, ಧನೇಶ್, ಶಿವಕುಮಾರ್, ಮೀನಾಕ್ಷಿ ಇದ್ದರು.
Published on:
Copied
Follow Us
ವಿರಾಜಪೇಟೆ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯಿಂದ ಮದ್ಯವರ್ಜನ ಶಿಬಿರ ಆಯೋಜಿಸುವ ಸಂಬಂಧ ವಿರಾಜಪೇಟೆಯ ಅಂಗಾಳ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ಪೂರ್ವಭಾವಿ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿತ್ತು.
ಕರಾವಳಿ ಪ್ರಾದೇಶಿಕ ವಿಭಾಗದ ಜನ ಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿ, ಶಿಬಿರಾರ್ಥಿಗಳನ್ನು ಗುರುತಿಸುವುದು, ಅವರಿಗೆ ಮಾನಸಿಕ ಧೈರ್ಯ ತುಂಬಿ ಶಿಬಿರಕ್ಕೆ ಕರೆತರುವುದು ಅತ್ಯಂತ ಜವಾಬ್ದಾರಿಯುತ ಕೆಲಸ. ನಿಯಮಾವಳಿಗಳಂತೆ ರಚಿಸಿರುವ ವ್ಯವಸ್ಥಾಪನಾ ಸಮಿತಿ ಕಾರ್ಯನಿರ್ವಹಿಸಬೇಕು ಎಂದರು.
ಬಳಿಕ ವ್ಯವಸ್ಥಾಪನಾ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಜೇಮ್ಸ್, ಗೌರವಾಧ್ಯಕ್ಷರಾಗಿ ಲಕ್ಷ್ಮೀ, ಕೋಶಾಧಿಕಾರಿಯಾಗಿ ಸುಮನ, ಉಪಾಧ್ಯಕ್ಷರಾಗಿ, ಬಿ.ಎಂ.ಗಣೇಶ್, ರಜಿತ ಕಾರ್ಯಪ್ಪ, ರೇಖಾ ಗಣೇಶ್, ಸಲಹಾ ಸಮಿತಿ ಸದಸ್ಯರು, ಗೌರವ ಸಲಹೆಗಾರರನ್ನು ಆಯ್ಕೆ ಮಾಡಲಾಯಿತು.
ವಿರಾಜಪೇಟೆ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಹರೀಶ್, ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಅರುಣ್ ಬಾನಂಗಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕ ವಿಠಲ್ ಸಾಲಿಯಾನ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಸುಬ್ರಹ್ಮಣ್ಯ, ದಯಾ ಚಂಗಪ್ಪ, ವಲಯ ಮೇಲ್ವಿಚಾರಕರಾದ ಶಿವಕುಮಾರ್, ಧನೇಶ್, ಕೃಷಿ ಯೋಜನಾಧಿಕಾರಿ ವಸಂತ್, ಸೇವಾ ಪ್ರತಿನಿಧಿ ಮೀನಾಕ್ಷಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು, ನವ ಜೀವನ ಸಮಿತಿ ಸದಸ್ಯರು, ವಿರಾಜಪೇಟೆ ಕ್ಷೇತ್ರದ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.