

ಪ್ರಮುಖ ಮುಖ್ಯಾಂಶಗಳು
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಜ.31ರಿಂದ ಫೆ. 4ರ ತನಕ ಕೊಡಗಿನಲ್ಲಿ ಶುಷ್ಕ ಹವಾಮಾನ ನಿರೀಕ್ಷಿಸಲಾಗಿದೆ. ಮಳೆಯಾಗುವ ಸಾಧ್ಯತೆ ಇಲ್ಲ. ಬೆಳಗ್ಗಿನ ವೇಳೆಯಲ್ಲಿ ತಂಪು ಮತ್ತು ಮಧ್ಯಾಹ್ನ ಹೆಚ್ಚು ಬಿಸಿಲು ಇರಲಿದೆ. ಕನಿಷ್ಠ ತಾಪಮಾನ 12-13 ಡಿಗ್ರಿ ಸೆಲ್ಸಿಯಸ್ ಇದ್ದರೆ, ಗರಿಷ್ಠ ತಾಪಮಾನ 31-32 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಧ್ಯಾಹ್ನದ ವೇಳೆ ಗಾಳಿಯಲ್ಲಿನ ತೇವಾಂಶ ಶೇ.16 ರಿಂದ ಶೇ. 47ರಷ್ಟು ಕಂಡು ಬರಲಿದೆ.
ಈಗಾಗಲೇ ಫೈರ್ ಲೈನ್ ಮಾಡಿಕೊಳ್ಳಲಾಗಿದೆ. ಅಲ್ಲಲ್ಲಿ ಬೆಂಕಿ ಕಾವಲುಗಾರರನ್ನೂ ನಿಯೋಜಿಸಲಾಗಿದೆ. ಬೆಂಕಿ ನಂದಿಸುವ ಬಗ್ಗೆ ಅಗ್ನಿಶಾಮಕ ಇಲಾಖೆ ಜತೆ ಸೇರಿಕೊಂಡು ನಮ್ಮ ಸಿಬ್ಬಂದಿಗೆ ತರಬೇತಿ ಕೊಡಿಸಲಾಗಿದೆ. ಫೈರ್ ಬ್ಲೋಯರ್ಸ್, ಮಿಸ್ಟ್ ಬ್ಲೋಯರ್ಸ್, ಅಗ್ನಿ ನಿರೋಧಕ ಜಾಕೆಟ್, ಪ್ರಥಮ ಚಿಕಿತ್ಸೆ ಕಿಟ್ ಎಲ್ಲಾ ಸಿಬ್ಬಂದಿಗೂ ಒದಗಿಸಲಾಗಿದೆ. ಅಗ್ನಿ ಶಾಮಕ ದಳದ ಜತೆಗೂ ಸಮನ್ವಯತೆ ಇಟ್ಟುಕೊಳ್ಳಲಾಗಿದೆ. ಫೈರ್ ವಾಚರ್ಸ್ ಮಾತ್ರವಲ್ಲದೇ ಸಂದರ್ಭಕ್ಕೆ ಅನುಗುಣವಾಗಿ ಆರ್‌ಆರ್‌ಟಿ ಮತ್ತು ಇಟಿಎಫ್ ಸಿಬ್ಬಂದಿ ಬಳಸಿಕೊಳ್ಳಲಾಗುವುದು.