

ಕಾಫಿ ಮಂಡಳಿ ಶಿಫಾರಸ್ಸು ಮಾಡುವ ತಳಿ ಹೊರತುಪಡಿಸಿ ಬೇರೆ ಯಾವುದೇ ಕಾಫಿ ಗಿಡಗಳನ್ನು ಕಾಫಿ ಬೆಳೆಗಾರರು ತಮ್ಮ ತೋಟದಲ್ಲಿ ನೆಡಬಾರದು. ಕಾಫಿ ಮಂಡಳಿಯ ತಜ್ಞರು ಹಲವಾರು ವರ್ಷಗಳ ಕಾಲ ಸಂಶೋಧನೆ ಮಾಡಿ ಸ್ಥಳೀಯ ಹವಾಮಾನ, ಭೌಗೋಳಿಕ ಪರಿಸ್ಥಿತಿ, ಕೀಟ, ರೋಗ ಬಾಧೆ ಸಹಿಸಿಕೊಳ್ಳುವ ಸಾಮರ್ಥ್ಯದ ಬಗ್ಗೆ ಕೂಲಂಕುಶ ಅಧ್ಯಯನ ನಡೆಸಿ ತಳಿಗಳನ್ನು ರೂಪಿಸಿರುತ್ತಾರೆ. ಇದನ್ನು ಹೊರತುಪಡಿಸಿ ವಿದೇಶಿ ತಳಿಗಳನ್ನು ಬೆಳೆಯಲು ಮುಂದಾದರೆ ಇಳುವರಿ ಮಾತ್ರವಲ್ಲದೆ ಬೇರೆ ಬೇರೆ ರೀತಿಯ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.