ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ಇಂತಹ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತುಂಬುವ ಜಾನಪದ ಕಲೆ, ಸಾಹಿತ್ಯವನ್ನು ಯುವಜನಾಂಗ ಮೈಗೂಢಿಸಿಕೊಳ್ಳಬೇಕು. ಕನ್ನಡ ಜನಪದ ಸಾಹಿತ್ಯ ಗ್ರಾಮೀಣ ಜನರ ಜೀವನದ ಸಹಜ ಅನುಭವಗಳು, ಗ್ರಾಮೀಣ ಸೊಗಡು, ಕಲೆ- ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುವ ಶ್ರೀಮಂತ ನೆಲದ ಸೊಗಡಾಗಿದೆ. ಜನಪದದಲ್ಲಿ ಗ್ರಾಮೀಣ ಕೃಷಿಕರ ಶ್ರಮಿಕ ಸಂಸ್ಕೃತಿಯನ್ನು ಮತ್ತು ಸ್ತ್ರೀಯರ ಸಂಭ್ರಮದ ಆಚರಣೆಗಳನ್ನು ಪ್ರತಿನಿಧಿಸುವ ಕಲೆ ಹಾಗೂ ವಿಶಿಷ್ಟ ಹಾಡುಗಳು ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಆಡುಭಾಷೆಯಲ್ಲಿನ ಪದಗಳ ಜೋಡಣೆಯನ್ನಾಧರಿಸಿ ತಮ್ಮ ದೈನಂದಿನ ಬದುಕಿನ ಕಷ್ಟ, ಸುಖ, ಸಂಬAಧ, ಅನುಭವಗಳನ್ನೇ ಜನಪದರು ಪದವಾಗಿಸಿದವರು. ಅವರು ಅಕ್ಷರ ಜ್ಞಾನ ಹೊಂದಿವರಲ್ಲ. ಆದರೂ ಸಾರ್ವಕಾಲಿಕ ಪದ ಕಟ್ಟಿ ಹಾಡಿದವರು ಎಂದು ಹೇಳಿದರು.