ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಕಲಾಕೃತಿ ಈ ವರ್ಷದ ಆಕರ್ಷಣೆ ಆಗಿದೆ. ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳನ್ನು ಬಳಸಿ 33 ಅಡಿ ಎತ್ತರ, 18 ಅಡಿ ಉದ್ದ ಹಾಗೂ 23 ಅಡಿ ಅಗಲದಲ್ಲಿ ಕಲಾಕೃತಿ ರಚಿಸಲಾಗುವುದು. ಇದಲ್ಲದೆ ಸುಮಾರು 8 ಸಾವಿರ ಕುಂಡಗಳಲ್ಲಿ ಮತ್ತು ಬೆಡ್‌ಗಳಲ್ಲಿ ಸಾಲ್ವಿಯಾ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಾಸ್, ಇಂಪೆಷಿಯನ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ ಸೇರಿದಂತೆ ವಿವಿಧ ಜಾತಿಯ 20 ಸಾವಿರ ಹೂವುಗಳನ್ನು ಬೆಳೆಯಲಾಗಿದೆ.