ಫಿಟ್ ಇಂಡಿಯಾ ಚಳವಳಿಯನ್ನು ೨೦೧೯ರ ಆ.೨೯ ರಂದು ಪ್ರಧಾನಿ ಮೋದಿಯವರು ಆರಂಭಿಸಿದರು. ಜನರಲ್ಲಿ ವರ್ಧನಾ ಬದಲಾವಣೆಯನ್ನು ತಂದು ದೈಹಿಕ ಚಟುವಟಿಕೆಗಳನ್ನೊಳಗೊಂಡ ಜೀವನಶೈಲಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿತ್ತು. ಈ ಅಭಿಯಾನವು ೩೦ ಲಕ್ಷಕ್ಕೂ ಹೆಚ್ಚು ಸೈಕ್ಲಿಂಗ್ ಆಸಕ್ತರನ್ನು ತೊಡಗಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮ ಪ್ರಚಾರದ ಮೂಲಕ ೭ ಕೋಟಿಗೂ ಹೆಚ್ಚು ಜನರನ್ನು ತಲುಪಿದೆ. ಈ ಅಭಿಯಾನವು ಸೈಕ್ಲಿಂಗ್ ಮಾತ್ರವಲ್ಲದೆ ಯೋಗ, ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಆರೋಗ್ಯವರ್ಧಕ ಚಟುವಟಿಕೆಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.