ಹುಲುಸೆಯಲ್ಲಿ ಯುಗಾದಿಗೆ ಮೊದಲ ಉಳುಮೆ

ಯುಗಾದಿ ಹಿನ್ನೆಲೆಯಲ್ಲಿ ಹುಲುಸೆ ಗ್ರಾಮದಲ್ಲಿ ರೈತರು ಮೊದಲ ಉಳುಮೆಗೆ ಚಾಲನೆ ನೀಡಿ ಸಂಭ್ರಮಿಸಿದರು.
ಯುಗಾದಿ ಹಿನ್ನೆಲೆಯಲ್ಲಿ ಹುಲುಸೆ ಗ್ರಾಮದಲ್ಲಿ ರೈತರು ಮೊದಲ ಉಳುಮೆಗೆ ಚಾಲನೆ ನೀಡಿ ಸಂಭ್ರಮಿಸಿದರು.
Published on
ಕುಶಾಲನಗರ:
ತಾಲೂಕಿನ ಹುಲುಸೆ ಹಾಗೂ ಕಣಿವೆ ಗ್ರಾಮದಲ್ಲಿ ಯುಗಾದಿ ಅಂಗವಾಗಿ ಗ್ರಾಮದ ಕೃಷಿಕರು ಹೊಸ ವರ್ಷದ ಮೊದಲ ಉಳುಮೆಗೆ ಗುರುವಾರ ಚಾಲನೆ ನೀಡಿದರು. ಉಳುವ ಎತ್ತು ಹಾಗೂ ಹಸುಗಳನ್ನು ಅಲಂಕರಿಸಿ ನೇಗಿಲು ನೊಗಗಳನ್ನು ತೊಳೆದು ಪೂಜಿಸಿ ಗ್ರಾಮದ ದೇವರ ಗದ್ದೆಯನ್ನು ಉಳುಮೆ ಮಾಡಿ ಸಂಭ್ರಮಿಸಿದರು.
ಇದಕ್ಕೂ ಮುನ್ನ ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಒಂದೆಡೆ ಸೇರಿದ ಕೃಷಿಕರು ಎತ್ತುಗಳನ್ನು ಪೂಜಿಸಿದರು. ಬಳಿಕ ಮಂಗಳ ವಾದ್ಯ ಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭ ಉಳುವ ಅಲಂಕೃತ ಎತ್ತುಗಳ ಸಾಲು ಬರುವಾಗ ದಾರಿಯಲ್ಲಿ ಕರ್ಪೂರ, ಗಂಧದ ಕಡ್ಡಿ ಹಚ್ಚಿ ಈ ವರ್ಷದ ಮಳೆ ಬೆಳೆ ಉತ್ತಮವಾಗಿ ಆಗಲಿ. ಜಾನುವಾರುಗಳಿಗೆ ಯಾವುದೇ ರೋಗ ರುಜಿನಗಳು ಬಾಧಿಸದೇ ಇರಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಮ ದೇವತಾ ಸಮಿತಿ ಅಧ್ಯಕ್ಷ ಗುರುನಂಜಪ್ಪ ಮಹೇಶ್ ಗ್ರಾಮದಲ್ಲಿ 90 ಮನೆಗಳಿದ್ದು ಪ್ರತಿ ಮನೆಗಳಿಂದಲೂ ಈ ಹಿಂದೆ ಹೊನ್ನಾರು ಉತ್ಸವದಲ್ಲಿ ಕೃಷಿಕರು ಎತ್ತುಗಳೊಂದಿಗೆ ಸೇರುತ್ತಿದ್ದರು. ಆದರೆ ಇತ್ತೀಚಿನ ದಶಕಗಳಲ್ಲಿ ಟ್ರಾö್ಯಕ್ಟರ್, ಟಿಲ್ಲರ್‌ನಂಥ ಯಂತ್ರಗಳು ಕೃಷಿ ಭೂಮಿಯನ್ನು ಆಕ್ರಮಿಸಿದ ಬಳಿಕ ಗ್ರಾಮೀಣ ಸಂಸ್ಕ್ರತಿ ನಶಿಸುತ್ತಿದೆ ಎಂದರು.
ಕಾರ್ಯದರ್ಶಿ ಶಂಕರಾಚಾರಿ, ಪ್ರಮುಖರಾದ ಮಲ್ಲಿಕಾರ್ಜುನ, ನಂಜುAಡ, ಚಂದ್ರಪ್ಪ, ಕುಮಾರ, ದಿನೇಶ, ರವಿ, ಸದಾಶಿವ, ಹೇಮಂತ್, ಬಸಪ್ಪ, ರಾಜು, ರಮೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net