ದಾನವಾಗಿ ಕೊಡಲಾದ ವ್ಯಕ್ತಿಯ ಮೂತ್ರಪಿಂಡ, ಕಣ್ಣುಗಳು, ಹೃದಯ ಕವಾಟಗಳು ಸೇರಿದಂತೆ ವಿವಿಧ ಅಂಗಾAಗಳನ್ನು ವೈದ್ಯಕೀಯ ನಿಯಮಾನುಸಾರ ಮೈಸೂರಿನ ವೈದ್ಯಕೀಯ ತಂಡ ಸ್ವೀಕರಿಸಿತು. ಈ ಅಂಗಗಳನ್ನು ಮೈಸೂರಿನ ಜೆಎಸ್‌ಎಸ್ ಮತ್ತು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕೊಂಡೊಯ್ದು ಅಗತ್ಯವಿರುವ ರೋಗಿಗಳಿಗೆ ಪ್ರತಿರೂಪಣೆ ಮಾಡಲಾಗುವುದು ಎಂದು ಕೊಡಗು ಮೆಡಿಕಲ್ ಕಾಲೇಜು ಡೀನ್ ಡಾ. ಲೋಕೇಶ್ ಮಾಹಿತಿ ನೀಡಿದ್ದಾರೆ.