ಕಾಳ್ಗಿಚ್ಚು ತಡೆಗಟ್ಟಲು ಬೆಂಕಿ ರೇಖೆ ಗುರುತು

ಸೋಮವಾರಪೇಟೆ-ಕುಶಾಲನಗರ ರಸ್ತೆಯ ಅಂಚಿನಲ್ಲಿ ಬೆಂಕಿ ರೇಖೆ ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ವಹಿಸಿರುವುದು.
ಸೋಮವಾರಪೇಟೆ-ಕುಶಾಲನಗರ ರಸ್ತೆಯ ಅಂಚಿನಲ್ಲಿ ಬೆಂಕಿ ರೇಖೆ ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ವಹಿಸಿರುವುದು.
Published on
ಕುಶಾಲನಗರ: ಬೇಸಿಗೆ ಸಮಯದಲ್ಲಿ ಕಾಳ್ಗಿಚ್ಚು ತಡೆಗಟ್ಟಲು ಅರಣ್ಯ ಇಲಾಖೆ ಸೂಚನೆಯಂತೆ ಹುದುಗೂರು ಉಪವಲಯ ಅರಣ್ಯಾಧಿಕಾರಿ ತಂಡ ಬೆಂಕಿ ರೇಖೆ ಗುರುತಿಸಿದೆ.
ಈಗಾಗಲೇ ಹುದುಗೂರು, ಯಡವನಾಡು, ಕಾಜೂರು, ಬಸವನ ಕಲ್ಲು ಮೀಸಲು ಅರಣ್ಯ ವ್ಯಾಪ್ತಿಯ ಸೋಮವಾರಪೇಟೆ ಮುಖ್ಯ ರಸ್ತೆ ಮತ್ತು ಸೋಮವಾರಪೇಟೆ-ಕುಶಾಲನಗರ ರಸ್ತೆಯ ಅಂಚಿನಲ್ಲಿ ಬೆಂಕಿ ರೇಖೆ ಗುರುತಿಸಿ, ಆ ಭಾಗದಲ್ಲಿ ಗಿಡಗಂಟಿಗಳನ್ನು ಕಡಿದು ಸುಡುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ವಹಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದಾರೆ.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್, ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಲೋಹಿತ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net