ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು

 ಸೋಮವಾರಪೇಟೆ ಸೋಮೇಶ್ವರ ದೇವಾಲಯದಲ್ಲಿ ಜೇನುಬೇಲಿ ಚಿತ್ರದ ಚಿತ್ರೀಕರಣಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ರೂಪ, ಮೇದಪ್ಪ, ಗುರಮಲ್ಲೇಶ್ ಇದ್ದರು.
ಸೋಮವಾರಪೇಟೆ ಸೋಮೇಶ್ವರ ದೇವಾಲಯದಲ್ಲಿ ಜೇನುಬೇಲಿ ಚಿತ್ರದ ಚಿತ್ರೀಕರಣಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ರೂಪ, ಮೇದಪ್ಪ, ಗುರಮಲ್ಲೇಶ್ ಇದ್ದರು.
Published on
ಸೋಮವಾರಪೇಟೆ : ಕನ್ನಡ ಚಿತ್ರಗಳು ಹೆಚ್ಚು ಹೆಚ್ಚು ನಿರ್ಮಾಣವಾಗಬೇಕು, ಚಿತ್ರರಂಗ ಬೆಳೆಯಬೇಕು. ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಬೇಕೆಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ಕೊಡಗಿನ ರೂಪಾಮೋಹನ್ ಸೃಷ್ಟಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸುತ್ತಿರುವ ಜೇನುಬೇಲಿ ಚಿತ್ರದ ಚಿತ್ರೀಕರಣಕ್ಕೆ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಇಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣವಾಗುತ್ತಿದೆ. ಆದರೆ ಕನ್ನಡಿಗರು ಚಿತ್ರಮಂದಿರಗಳಿಗೆ ತೆರಳಿ ಚಿತ್ರನೋಡಿದರೆ ಚಿತ್ರರಂಗ ಉಳಿಯುತ್ತದೆ, ಬೆಳೆಯುತ್ತದೆ ಎಂದರು.ಕೊಡಗು ಜಿಲ್ಲೆಯ ಮೂಲದವರಾದ ರೂಪಾ ಮೋಹನ್ ಉತ್ತಮ ಕಥೆಯನ್ನು ಆಯ್ಕೆಮಾಡಿಕೊಂಡು ಸಿನಿಮಾ ಮಾಡಲು ಹೊರಟಿರುವುದು ಶ್ಲಾಘನೀಯವೆಂದರು.
ಚಿತ್ರದ ನಿರ್ಮಾಪಕಿ, ನಿರ್ದೇಶಕಿ ರೂಪಾಮೋಹನ್ ಮಾತನಾಡಿ, ಜೇನು ಕುರುಬರ ಜೀವನಶೈಲಿ ಮತ್ತು ಅವರ ನೋವು ನಲಿವುಗಳ ಕಥೆಯನ್ನು ಕಲಾತ್ಮಕ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರವನ್ನು ಬಹುತೇಕ ಕೊಡಗಿನಲ್ಲಿಯೇ ಚಿತ್ರಿಕರಿಸಲಾಗುವುದು ಎಂದು ತಿಳಿಸಿದರು.
ಚಿತ್ರೀಕರಣ ಮಹೂರ್ತ ಸಂದರ್ಭ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಬೇಳೂರು ಗ್ರಾಮದ ಕಾಫಿ ಬೆಳೆಗಾರರಾದ ಬಿ.ಜಿ.ಗುರುಮಲ್ಲೇಶ, ಕೆ.ಎಂ.ನಿರಂಜನ್, ಬೇಳೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುದರ್ಶನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net