ವೀರಾಜಪೇಟೆ ಬಳಿಯ ಕೊಟ್ಟೋಳಿಯ ದೇವಯ್ಯ ಅವರ ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗೇಶ್ವರ್ ಅವರನ್ನು ಶಾಲು, ಪೇಟ, ಹಾರ ಮತ್ತು ಫಲ ತಾಂಬೂಲದೊAದಿಗೆ ಸನ್ಮಾನಿಸಿ ಗೌರವಿಸಲಾಯ್ತು. ಅಧ್ಯಕ್ಷತೆ ವಹಿಸಿದ್ದ ಹಿರಿಯರಾದ ಬಾಬು ಅಜಿಲ ಮಾತನಾಡಿ, ಯೋಗೇಶ್ವರ್ ದೇಶಸೇವೆಗಾಗಿ ಆಯ್ಕೆಯಾಗಿರುವುದು ಸಮುದಾಯಕ್ಕೆ ಹೆಮ್ಮೆ ತಂದಿದೆ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರಲ್ಲಿರುವ ಪ್ರತಿಭೆಗಳನ್ನು ಹೊರತರಲು ಶ್ರಮಿಸಬೇಕು. ಜತೆಗೆ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು. ಉತ್ಸಾಹಿ ಯುವಕ ಯೋಗೇಶ್ವರ್ ಅಗ್ನಿವೀರ್ ಯೋಧನಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವದು, ಉಳಿದ ಯುವಕರಿಗೆ ಮಾದರಿ ಎಂದರು.