16ರಿಂದ 50 ವರ್ಷದೊಳಗಿನ ಆಸಕ್ತರು ಮಿಸೆಸ್, ಮಿಸ್, ಮಿಸ್ಟರ್, ಟೀನ್ ಗರ್ಲ್, ಟೀನ್ ಬಾಯ್, ಪ್ರಿನ್ಸ್ ಮತ್ತು ಪ್ರಿನ್ಸೆಸ್ ವಿಭಾಗಗಳಲ್ಲಿ ಭಾಗವಹಿಸಬಹುದು. ಭಾಗವಹಿಸುವವರಿಗೆ ವೃತ್ತಿಪರ ಫೋಟೋಶೂಟ್, ಪ್ರೀಮಿಯಂ ಕಾಸ್ಟ್ಯೂಮ್‌ಗಳು, ವೃತ್ತಿಪರ ಮೇಕಪ್ ಮತ್ತು ಸ್ಟೆöÊಲಿಂಗ್, ರ‍್ಯಾಂಪ್ ವಾಕ್ ಹಾಗೂ ಗ್ರೂಮಿಂಗ್ ತರಬೇತಿ, ಪ್ರಮಾಣಪತ್ರ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ಉದ್ಯಮದ ಪ್ರಮುಖರೊಂದಿಗೆ ನೆಟ್ ವರ್ಕಿಂಗ್ ಸೇರಿದಂತೆ ವಿವಿಧ ಅವಕಾಶಗಳು ದೊರೆಯಲಿದೆ. ಆಯ್ಕೆಯಾದ ಪ್ರತಿಭೆಗಳಿಗೆ ಮುಂದಿನ ದಿನಗಳಲ್ಲಿ ಮಾಡೆಲಿಂಗ್, ಚಲನಚಿತ್ರ ಹಾಗೂ ಮ್ಯೂಸಿಕ್ ವೀಡಿಯೋಗಳಲ್ಲಿ ಅವಕಾಶಗಳ ಸಾಧ್ಯತೆಯೂ ಇರಲಿದೆ ಎಂದರು.