ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಂಭಾAಗಣದಲ್ಲಿ ಕೆಡಿಪಿ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಧರ್ಮಜ ಉತ್ತಪ್ಪ, ಡಾ. ಮಂತರ್ ಗೌಡ, ಎ.ಎಸ್. ಪೊನ್ನಣ್ಣ ಇದ್ದರು.
ಮಡಿಕೇರಿ ತಾಲೂಕು ಮುಕ್ಕೋಡ್ಲು ಗ್ರಾಮದಲ್ಲಿ ವಯೋವೃದ್ಧ ದಂಪತಿಗೆ ಸೇರಿದ ತೋಟ ನಾಶ ಪ್ರಕರಣಕ್ಕೆ ಸಂಬAಧಿಸಿದAತೆ ವಿಸ್ತೃತ ತನಿಖೆ ನಡೆಸಿ ಕೂಡಲೇ ವರದಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಜಿಲ್ಲಾ ಪಂಚಾಯಿತಿ ಸಂಭಾAಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಕ್ಕೋಡ್ಲು ಗ್ರಾಮದಲ್ಲಿ ನಾಣಿಯಪ್ಪ ಎಂಬವರಿಗೆ ಸೇರಿದ ಸ.ನಂ. 33/2ರ ಜಾಗದಲ್ಲಿನ 2 ಎಕರೆ ತೋಟ ಅರಣ್ಯ ಪ್ರದೇಶ ಅತಿಕ್ರಮಣ ಎನ್ನುವ ಕಾರಣ ನೀಡಿ ಅಲ್ಲಿ ಹಲವಾರು ವರ್ಷಗಳಿಂದ ಬೆಳೆದಿದ್ದ ಕಾಫಿ, ಏಲಕ್ಕಿ ಗಿಡಗಳನ್ನು ಅರಣ್ಯ ಇಲಾಖೆಯಿಂದ ಕಡಿದು ನಾಶ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾಹಿತಿ ಬಯಸಿದರು. ಈ ಸಂದರ್ಭ ಉತ್ತರಿಸಿದ ಡಿಸಿಎಫ್ ಅಭಿಷೇಕ್ ಆ ಜಾಗ ದೇವರಕಾಡು ಆಗಿದ್ದು, ಅಲ್ಲಿ ಹೊಸದಾಗಿ ನಡೆದಿದ್ದ ಅತಿಕ್ರಮಣವನ್ನು ತೆರವು ಮಾಡಲಾಗಿದೆ ಎಂದು ಸಮಜಾಯಿಷಿಕೆ ನೀಡಿದರು. ಇದರಿಂದ ತೃಪ್ತರಾಗದ ಮಂತರ್ ಗೌಡ ಕಂದಾಯ ದಾಖಲೆಗಳಲ್ಲಿ ಆ ಜಾಗ ಪೈಸಾರಿ ಎಂದು ಇರುವ ಬಗ್ಗೆ ಗಮನ ಸೆಳೆದರು .
ಆದರೆ ಇದು ದೇವರಕಾಡು ಎಂದೇ ಇದೆ. ಒಮ್ಮೆ ಯಾವುದೇ ದಾಖಲೆ ಅರಣ್ಯ ಇಲಾಖೆ ಹೆಸರಿಗೆ ಆದರೆ ಅದು ಬದಲಾಗುವುದಿಲ್ಲ. ಅಲ್ಲದೆ ಅರಣ್ಯ ಪ್ರದೇಶ ಅತಿಕ್ರಮಣವನ್ನು ತೆರವು ಮಾಡುವ ಅಧಿಕಾರಿ ಇಲಾಖೆಗೆ ಇದೆ ಎಂದು ತಮ್ಮ ಇಲಾಖೆ ಕ್ರಮವನ್ನು ಅಭಿಷೇಕ್ ಸಮರ್ಥಿಸಿಕೊಂಡರು. ಅಲ್ಲಿ ಹೊಸದಾಗಿ ಅರಣ್ಯ ಪ್ರದೇಶ ಅತಿಕ್ರಮಣ ಆಗಿದೆ ಎನ್ನುವ ಡಿಸಿಎಫ್ ವಾದವನ್ನು ಡಾ. ಮಂತರ್ ಗೌಡ ಬಲವಾಗಿ ವಿರೋಧಿಸಿದರು. ಕೆಡಿಪಿ ಸದಸ್ಯ ಹಾನಕೋಡು ಸುರೇಶ್ ಕೂಡ ಇದಕ್ಕೆ ಧ್ವನಿ ಸೇರಿಸಿದರು.
ಅಲ್ಲಿ ಕಡಿದಿದ್ದ ಗಿಡಗಳ ವೀಡೀಯೋವನ್ನು ಡಾ. ಮಂತರ್ ಗೌಡ ಎಲ್ಲರ ಎದುರು ದೊಡ್ಡ ಪರದೆಯಲ್ಲಿ ಪ್ರದರ್ಶಿಸಿದ್ದರು. ಈ ಗಿಡ ನೋಡಿದರೆ ಹೊಸದಾಗಿ ನೆಟ್ಟಿರುವ ಗಿಡ ತರ ಕಾಣುತ್ತದಾ ಎಂದು ಡಿಸಿಎಫ್ ಅವರನ್ನು ಪ್ರಶ್ನಿಸಿದರು. ನಿಮ್ಮ ತಪ್ಪು ಒಪ್ಪಿಕೊಂಡರೆ ದೊಡ್ಡವರಾಗುತ್ತೀರಿ ಎಂದು ಬಿಸಿ ಮುಟ್ಟಿಸಿದರು. ಇಲಾಖೆಗಳ ಮಧ್ಯೆ ಸಮನ್ವಯತೆ ಇಲ್ಲದಾಗ ಇಂಥದ್ದು ನಡೆಯುತ್ತದೆ. ಆ ಕುಟುಂಬಕ್ಕೆ ಆದ ನಷ್ಟ ಭರಿಸುವವರು ಯಾರು ? ರೈತರಿಗೆ ಯಾವುದೇ ಅನ್ಯಾಯ ಆಗಬಾರದು. ನೊಟೀಸ್ ಕೊಡದೆ ಕ್ರಮ ತೆಗೆದುಕೊಂಡಿರುವುದು ಸರಿಯಲ್ಲ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಉಸ್ತುವಾರಿ ಸಚಿವ ಬೋಸರಾಜು ಈ ಪ್ರಕರಣದಲ್ಲಿ ಅರಣ್ಯ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಆಗಬೇಕು. ಎಸಿ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಕೂಡಲೇ ತನಿಖೆಯ ವರದಿ ಕೊಡಬೇಕು ಎಂದು ಸೂಚಿಸಿದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ರಾಜ್ಯ ಹೆದ್ದಾರಿಗಳ ನಿರ್ವಹಣೆಗೆ 7.5 ಕೋಟಿ ರೂ. ಬಿಡುಗಡೆ ಆಗಿದ್ದು, 43 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲಾ ಮುಖ್ಯ ರಸ್ತೆಗಳಿಗೆ 14.15 ಕೋಟಿ ರೂ. ಅನುದಾನ ಬಂದಿದ್ದು 112 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಪಿಡಬ್ಯೂಡಿ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕಾಮಗಾರಿಗಳ ಗುಣಮಟ್ಟದ ಬಗ್ಗೆ ದೂರುಗಳು ಬಾರದಂತೆ ಕೆಲಸಗಳು ನಡೆಯಬೇಕು. ಭಾಗಮಂಡಲ-ಕರಿಕೆ ರಸ್ತೆ ಕಾಮಗಾರಿ ಬಗ್ಗೆ ಬಂದಿರುವ ದೂರಿಗೆ ಸ್ಪಷ್ಟನೆ ಕೊಡಬೇಕು. ಸಿದ್ದಾಪುರ, ಮಾಕುಟ್ಟ ರಸ್ತೆ ಕೆಲಸಗಳನ್ನು ಆದಷ್ಟು ಶೀಘ್ರ ಮುಗಿಸಬೇಕು. ಗುಂಡಿ ಮುಚ್ಚುವ ಕೆಲಸಗಳಿಗೆ ಆದ್ಯತೆ ಕೊಡಬೇಕು ಎಂದು ಸೂಚಿಸಿದರು. ರಸ್ತೆ ದುರವಸ್ಥೆ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದೆ. ಮಳೆ ನಿಂತ ಕೂಡಲೇ ಕೆಲಸ ಆರಂಭಿಸಬೇಕಿತ್ತು ಎಂದು ಸಚಿವ ಬೋಸರಾಜು ಹೇಳಿದರು. ಕಳೆದ ವಾರ ಭೂಮಿ ಪೂಜೆ ನೆರವೇರಿಸಿದ ಕಡಮಕಲ್ಲು ರಸ್ತೆ ಕಾಮಗಾರಿ ಇನ್ನೂ ಶುರು ಮಾಡದ ಬಗ್ಗೆ ಮಂತರ್ ಗೌಡ ಆಕ್ಷೇಪ ವ್ಯಕ್ತಪಡಿಸಿದರು. ಭೂಮಿ ಪೂಜೆ ಆದ ಕೂಡಲೇ ಕಾಮಗಾರಿ ನಡೆಸಬೇಕು. ಇಲ್ಲದಿದ್ದರೆ ತಪ್ಪಿ ಸಂದೇಶ ರವಾನೆ ಆಗುತ್ತದೆ. ಈಗ ಕಾಫಿ ಸೀಸನ್ ಇರುವಾಗ ರೈತರಿಗೆ ತೊಂದರೆ ಆಗುವ ಕೆಲಸಗಳು ನಡೆಯಬಾರದು ಎಂದರು.
ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಎಸ್.ಪಿ. ಕೆ. ರಾಮರಾಜನ್, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಇದ್ದರು. ಇದೇ ವೇಳೆ
ಪ್ರವಾಸೋದ್ಯ ಇಲಾಖೆ ಹೊರತಂದಿರುವ ಕಾಫಿ ಟೇಬಲ್ ಪುಸ್ತಕವನ್ನು ಸಚಿವ ಬೋಸರಾಜು ಬಿಡುಗಡೆ ಮಾಡಿದರು.